ಮಡಿಕೇರಿ, ಮೇ 13: ಗೋಣಿಕೊಪ್ಪಲು ಕಾಲ್ಸ್ ಶಾಲಾ ಆವರಣದಲ್ಲಿರುವ ಶ್ರೀ ವಿದ್ಯಾಗಣಪತಿ, ಆಂಜನೇಯ, ಸುಬ್ರಹ್ಮಣ್ಯ ದೇವರ ದಶಮಾನೋತ್ಸವ ಕಾರ್ಯಕ್ರಮ ತಾ. 14 ರಿಂದ 16 ರ ತನಕ ಪೂಜಾ ಕೈಂಕರ್ಯಗಳೊಂದಿಗೆ ಜರುಗಲಿದೆ.
ತಾ. 14 ರಂದು ಬೆಳಿಗ್ಗೆ 7 ರಿಂದ ವಿವಿಧ ಧಾರ್ಮಿಕ ವಿಧಿಗಳೊಂದಿಗೆ ಅಂದು ರಾತ್ರಿಯವರೆಗೆ ಪೂಜೆಗಳು ನೆರವೇರಲಿದೆ. ತಾ. 15 ರಂದು ಪ್ರಾತಃಕಾಲ 7 ರಿಂದ ರಾತ್ರಿವರೆಗೆ ಪೂಜಾದಿ ಮುಂದುವರೆಯಲಿದೆ. ತಾ. 16 ರಂದು ನವಚಂಡಿ ಹೋಮ, ತತ್ವಕಲಾ ಹೋಮ, ಕುಂಭಾಭಿಷೇಕದೊಂದಿಗೆ ಮಹಾಪೂಜೆ ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.