ಮಡಿಕೇರಿ, ಮೇ 12: ಭಾರತೀಯ ಸೇನೆಯವರು ಇವರು “ಸೋಲ್ಜರ್ ಜೆನರಲ್ ಡ್ಯೂಟಿ” (ಮಹಿಳಾ ಸೇನಾ ಪೊಲೀಸ್) ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದ್ದು, ಈ ಸಂಬಂಧ ಜುಲೈ-2019 ರಿಂದ ಸೆಪ್ಟೆಂಬರ್-2019ರ ಅವಧಿಯಲ್ಲಿ ರಾಜ್ಯದ ಬೆಳಗಾವಿ ನಗರದಲ್ಲಿ ಸೇನಾ ನೇಮಕಾತಿ ರ್ಯಾಲಿ ಆಯೋಜಿಸಿದೆ. ಈ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಇಚ್ಛಿಸುವ ಅರ್ಹ ಮತ್ತು ಆಸಕ್ತ ಮಹಿಳಾ ಅಭ್ಯರ್ಥಿಗಳು ತಿತಿತಿ.ರಿoiಟಿiಟಿಜiಚಿಟಿ ಚಿಡಿmಥಿ.ಟಿiಛಿ.iಟಿ ಮುಖಾಂತರ ಜೂನ್ 8 ರವರೆಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳು: 100 (ಮಹಿಳಾ ಸೇನಾ ಪೊಲೀಸ್), ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ ಅಥವಾ 10ನೇ ತರಗತಿಯಲ್ಲಿ ಕನಿಷ್ಟ ಶೇ. 45 ಅಂಕಗಳೊಂದಿಗೆ ತೇರ್ಗಡೆ ಮತ್ತು ಪ್ರತಿ ವಿಷಯದಲ್ಲೂ ಕನಿಷ್ಟ ಶೇ. 33 ಅಂಕಗಳನ್ನು ಪಡೆದಿರಬೇಕು. ವಯೋಮಿತಿ ಕನಿಷ್ಟ 17 1/2 ರಿಂದ ಗರಿಷ್ಠ 21 ವರ್ಷಗಳು. ನಿಯಮಗಳಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. (1.10.1998 ಹಾಗೂ 1.4.2002 ರೊಳಗೆ ಜನಿಸಿರಬೇಕು).

ದೈಹಿಕ ಅರ್ಹತೆ-ಎತ್ತರ: 142 ಸೆಂ.ಮೀ. ತೂಕ: ಸೇನಾ ವೈದ್ಯಕೀಯ ಮಾನದಂಡಗಳ ಪ್ರಕಾರ ಎತ್ತರ ಮತ್ತು ವಯಸ್ಸಿನ ಪ್ರಮಾಣಕ್ಕೆ ಅನುಗುಣವಾಗಿರಬೇಕು. ಅರ್ಜಿ ಸಲ್ಲಿಸಲು ಜೂನ್ 8 ಕಡೆ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಹಾಗೂ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ವೆಬ್‍ಸೈಟ್ ತಿತಿತಿ.ರಿoiಟಿiಟಿಜiಚಿಟಿಚಿಡಿmಥಿ.ಟಿiಛಿ.iಟಿ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.