ಸುಂಟಿಕೊಪ್ಪ, ಮೇ 12 : ಐಗೂರು ಗ್ರಾಮ ಪಂಚಾಯಿತಿ ವಿಭಾಗದಲ್ಲಿ ಒಂಟಿ ಸಲಗ ಹಾವಳಿ ಹೆಚ್ಚಾಗಿದೆ. ರಾತ್ರಿ ವೇಳೆ ಆಹಾರ ಅರಸಿ ಬರುವ ಕಾಡಾನೆ ಕಾಫಿತೋಟಕ್ಕೆ ನುಗ್ಗಿ ಬಾಳೆ ಗಿಡ,ತೆಂಗು, ಹಲಸಿನ ಕಾಯಿಯನ್ನು ಕಿತ್ತು ಹಾಕಿ ಬೆಳಗಿನ ಜಾವ ಮೀಸಲು ಅರಣ್ಯಕ್ಕೆ ತೆರಳುತ್ತಿದೆ. ಐಗೂರು, ಯಡವಾರೆ ರಸ್ತೆ ಕಾಮಗಾರಿ ನಿರ್ವಹಿಸುತ್ತಿರುವಾಗ ರಸ್ತೆ ದಾಟುವಾಗ ಕಾರ್ಮಿಕರು ಕಾಡಾನೆಯನ್ನು ಕಂಡು ಹೆದರಿ ಕಾಲ್ಕಿತ್ತಿದ್ದಾರೆ.