ನಾಪೆÉÇೀಕ್ಲು, ಮೇ 13 : ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೆÉÇೀಕ್ಲು ವಿಭಾಗದಲ್ಲಿ ಅತಿವೃಷ್ಟಿಯಿಂದಾಗಿ ಉಂಟಾದ ಬೆಳೆ ನಷ್ಟ ಪರಿಹಾರ ವಿತರಣೆಯಲ್ಲಿ ಗೊಂದಲ ಉಂಟಾಗಿದ್ದು, ಕೂಡಲೇ ಇದಕ್ಕೆ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಒತ್ತಾಯಿಸಿ ಸ್ಥಳೀಯ ಬೆಳೆಗಾರರÀು ಮತ್ತು ಸಾರ್ವಜನಿಕರು, ನಾಪೆÉÇೀಕ್ಲು ನಾಡು ಕಚೇರಿಯ ಮುಂದೆ ಸರಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ವಿವಿಧ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದರು.

ಸರಕಾರ ಈಗಾಗಲೇ ನಷ್ಟವಾದ ಬೆಳೆಗಾರರಿಗೆ ಒಂದು ಹೆಕ್ಟೇರ್ ಪ್ರದೇಶಕ್ಕೆ ನಷ್ಟ ಪರಿಹಾರವಾಗಿ ರೂ. 36 ಸಾವಿರಗಳನ್ನು ಘೋಷಿಸಿ ಒಂದು ವರ್ಷ ಕಳೆದರೂ ಬೆಳೆಗಾರನಿಗೆ ಪರಿಹಾರ ದೊರಕಿಲ್ಲ. ಬೆಳೆಗಾರರಿಗೆ ಕೇವಲ 800 ರಿಂದ 5000 ರೂ.ಗಳ ಪರಿಹಾರವನ್ನು ವಿತರಿಸಿ ತಾರತಮ್ಯ ಮಾಡಲಾಗಿದೆ ಎಂದು ಬೆಳೆಗಾರ ರಮೇಶ್ ಮುದ್ದಯ್ಯ ಆರೋಪಿಸಿದರು. ಎಲ್ಲಾ ಬೆಳೆಗಾರರು ನಷ್ಟ ಪರಿಹಾರಕ್ಕಾಗಿ ದಾಖಲೆಯೊಂದಿಗೆ ಅರ್ಜಿಯನ್ನು ಸಲ್ಲಿಸಿದ್ದರೂ, ಪರಿಹಾರ ಕೆಲವರಿಗೆ ಮಾತ್ರ ದೊರಕಿದೆ ಎಂದ ಅವರು ಸರಕಾರ ಸಾಲಮನ್ನಾ ಸಹ ಸರಿಯಾದ ಸಿಕ್ಕಿಲ್ಲ ಎಂದು ಆರೋಪಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮಾತನಾಡಿ, ಬೆಳೆ ಪರಿಹಾರಕ್ಕಾಗಿ ರೂ. 30 ಕೋಟಿ ಹಣ ಬಿಡುಗಡೆಗೊಂಡಿದೆ. ಎಂದು ಸರಕಾರದ ಅಧಿಕಾರಿಗಳು ಹೇಳಿದರು. ಪರಿಹಾರದಲ್ಲಿ ತಾರತಮ್ಯ ಏಕೆ? ಇದಕ್ಕೆ ನಾವು ಯಾರನ್ನು ಕೇಳಬೇಕು ಎಂದ ಅವರು ಸರಕಾರ ಬೆಳೆಗಾರರ ತಾಳ್ಮೆಯನ್ನು ಕೆಣಕಬಾರದು ಇದಕ್ಕೆ ವಾರದ ಗಡುವು ನೀಡಿದ ಅವರು ಒಂದು ವಾರದೊಳಗೆ ಜಿಲ್ಲಾಧಿಕಾರಿಗಳು ಈ ಬಗ್ಗೆ ಸಾರ್ವಜನಿಕವಾಗಿ ಬೆಳೆಗಾರರಿಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು. ತಪ್ಪಿದರೆ ಈ ವಿಭಾಗದ ಎಲ್ಲಾ ಬೆಳೆಗಾರರೊಂದಿಗೆ ಉಗ್ರ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.

ಕೊಡವ ಸಮಾಜದ ಅಧ್ಯಕ್ಷ ಮನು ಮತ್ತಪ್ಪ ಮಾತನಾಡಿ, ಸರಕಾರ ಬೆಳೆಗಾರರನ್ನು ಶೋಷಣೆ ಮಾಡುತ್ತಿದ್ದು, ಬೆಳೆ ನಷ್ಟ ಪರಿಹಾರವನ್ನು ಬೆಳೆಗಾರರ ಖಾತೆಗೆ ಜಮೆ ಮಾಡಿ ನಂತರ ಯಾವದೇ ಸೂಚನೆ ನೀಡದೇ ಖಾತೆಯಿಂದ ಹಣವನ್ನು ಹಿಂಪಡೆದು ಬೆಳೆಗಾರರನ್ನು ವಂಚಿಸಿದ್ದಾರೆ ಎಂದು ಆರೋಪಿಸಿದರು. ಪರಿಹಾರವಾಗಿ ಈಗಾಗಲೆ ಮುಖ್ಯಮಂತ್ರಿಗಳ ನಿಧಿಯಲ್ಲಿ ರೂ. 150 ಕೋಟಿ ಹಣ ಇದೆ ಎಂಬ ಮಾಹಿತಿ ಇದ್ದು ಇದನ್ನು ಖಾತೆಯಲ್ಲಿ ಮುಖ್ಯಮಂತ್ರಿಗಳು ಏಕೆ ಇಟ್ಟುಕೊಂಡು ಬೆಳೆಗಾರರನ್ನು ವಂಚಿಸುತ್ತಿದ್ದಾರೆ ಎಂದ ಅವರು ಕೂಡಲೇ ಪರಿಹಾರನ್ನು ಸಮಾನವಾಗಿ ವಿತರಣೆ ಮಾಡಬೇಕು; ತಪ್ಪಿದರೆ ನಾಡ ಕಚೇರಿಗೆ ಬೀಗ ಹಾಕಿ ದಿಗ್ಭಂಧನ ಮಾಡಲಾಗುವದು ಎಂದು ಎಚ್ಚರಿಸಿದರು.

ಎನ್.ಎಸ್. ಉದಯ ಶಂಕರ್ ಮತ್ತಿತರರು ಮಾತನಾಡಿದರು. ಈ ಸಂದರ್ಭ ಕಂದಾಯ ಪರಿವೀಕ್ಷಕ ಪಿ.ಡಿ. ರಾಮಯ್ಯ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ರಾಮಯ್ಯ ನಾವು ನಮ್ಮ ಕಚೇರಿಗೆ ಬಂದ ಅರ್ಜಿಯನ್ನು ಪರಿಶೀಲಿಸಿ ಕಳುಹಿಸಿದ್ದೇವೆ ಪರಿಹಾರವನ್ನು ಮೇಲಧಿಕಾರಿಗಳು ಮಂಜೂರು ಮಾಡುತ್ತಾರೆ ಅದರಂತೆ ನಿಮ್ಮ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವದು ಎಂದರು

ಪ್ರತಿಭಟನೆಯಲ್ಲಿ ಬೆಳೆಗಾರರಾದ ಮನು ಮಹೇಶ್, ಜಾಲಿ ಪೂವಪ್ಪ, ಬೊಳ್ಳಚೆಟ್ಟಿರ ಸುರೇಶ್, ಬಿದ್ದಂಡ ಉಷಾ ಬೊಳ್ಳಮ್ಮ, ಕಾಂಡಂಡ ಜಯ, ಅರೆಯಡ ಅಶೋಕ, ಅರೆಯಡ ರತ್ನ, ಮುಕ್ಕಾಟೀರ ವಿನಯ್, ಅರೆಯಡ ರಘು ಕರುಂಬಯ್ಯ, ಬೊಳ್ಳೆಪಂಡ ಹರೀಶ್, ನಂದ ಕರುಂಬಯ್ಯ, ಮಾಳೆಯಂಡ ಅಯ್ಯಪ್ಪ, ವಿಶು ಪೂವಯ್ಯ, ಕುಲ್ಲೇಟಿರ ಅಜಿತ್ ನಾಣಯ್ಯ, ಕೊಂಡೀರ ರಾಜಪ್ಪ, ಚೋಕಿರ ಸಜಿತ್ ಮತ್ತಿತರರು ಇದ್ದರು.

-ದುಗ್ಗಳ