ಕೂಡಿಗೆ, ಮೇ 13: ಇಲ್ಲಿಗೆ ಸಮೀಪದ ಹೆಬ್ಬಾಲೆಯ ಹುಲಸೆ ಗ್ರಾಮದ ಬಳಿ ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರ ಕಾಲು ಮುರಿತಕ್ಕೊಳಗಾದ ಘಟನೆ ನಡೆದಿದೆ.

ಕುಶಾಲನಗರದಿಂದ ಹೆಬ್ಬಾಲೆಯತ್ತ ಸಾಗುತ್ತಿದ್ದ ಬೈಕ್(ಕೆಎ12 ಕೆ2976) ಹಾಗೂ ಎದುರಿನಿಂದ ಬರುತ್ತಿದ್ದ ಕಾರಿನ (ಕೆಎ05 ಎಂಜೆ054) ನಡುವೆ ಅಪಘಾತ ನಡೆದಿದೆ. ಈ ಸಂದರ್ಭ ಬೈಕ್ ಸವಾರರಿಬ್ಬರು ಕಾರಿನ ಮುಂಭಾಗದ ಗಾಜಿಗೆ ಅಪ್ಪಳಿಸಿ ರಸ್ತೆಗೆ ಬಿದ್ದಿದ್ದು, ಬೈಕ್ ಮುಂಬದಿ ಸವಾರ ಶನಿವಾರಸಂತೆಯ ಹೇಮ್ ರಾಜ್ (25) ಅವರ ಬಲಗಾಲು ಮತ್ತು ಸಕಲೇಶಪುರದ ಹೆಗ್ಗದ್ದೆಯ ಪ್ರಖ್ಯಾತ್ (30) ಅವರ ಎರಡೂ ಕಾಲು ಮುರಿತಕ್ಕೊಳಗಾಗಿದೆ. ಬೈಕ್ ಸವಾರರಿಬ್ಬರು ಕುಶಾಲನಗರದ ಶ್ರೀ ರಾಂ ಫೈನಾನ್ಸ್ ಅಲ್ಲಿ ಫೀಲ್ಡ್ ಆಫೀಸರ್‍ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಪಘಾತದ ಹಿನ್ನೆಲೆ ಕಾರು ಮತ್ತು ಬೈಕ್ ಜಖಂಗೊಂಡಿದ್ದು, ಕಾರು ಬಲಭಾಗದ ಶುಂಠಿಗದ್ದೆಯೊಳಗೆ ನುಗ್ಗಿದೆ.

ಗಾಯಾಳುಗಳಿಗೆ ಕುಶಾಲನಗರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ. ಮೈಸೂರಿನ ಜಿಲ್ಲಾಸ್ಪತ್ರೆಗೆ ಹಾಗೂ ಕಾರು ಚಾಲಕ ಕೃಷ್ಣ ಹಾಗೂ ಕಾರಿನಲ್ಲಿದ್ದ ಮಂಜು ಎಂಬವರನ್ನು ಮಡಿಕೇರಿಗೆ ರವಾನಿಸಲಾಗಿದೆ. ಸ್ಥಳಕ್ಕೆ ಕುಶಾಲನಗರ ಸಂಚಾರಿ ಪೋಲೀಸ್ ಠಾಣಾಧಿಕಾರಿ ಸೋಮೇಗೌಡ ಹಾಗೂ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.