ಮಡಿಕೇರಿ, ಮೇ 13: ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕಂಬಿಬಾಣೆ ಚಿಕ್ಲಿ ಹೊಳೆ ಡ್ಯಾಂ ಸಮೀಪದ ಮೆಗ್ಡೋರ್ ಎಸ್ಟೇಟ್ನಲ್ಲಿ ಅಕ್ರಮವಾಗಿ ಕಡಿದು ಸಂಗ್ರಹಿಟ್ಟಿದ್ದ ಬೀಟೆ ಮರದ ನಾಟಾಗಳನ್ನು ಪತ್ತೆ ಹಚ್ಚುವಲ್ಲಿ ಡಿಸಿಐಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಡಿಸಿಐಬಿ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆ ಕಂಬಿಬಾಣೆ ಚಿಕ್ಲಿ ಹೊಳೆ ಡ್ಯಾಂ ಸಮೀಪದ ಮೆಗ್ಡೋರ್ ಎಸ್ಟೇಟ್ನಲ್ಲಿ ಸಿಲ್ವರ್ ಹಾಗೂ ಇನ್ನಿತರ ಮರಗಳೊಂದಿಗೆ ಬೀಟೆ ಮರವನ್ನು ಕಡಿದು ನಾಟಾಗಳನ್ನಾಗಿ ಮಾಡಿ ಸಂಗ್ರಹಿಸಿ ಕಾಣದಂತೆ ಮುಚ್ಚಿಡಲಾಗಿದ್ದು, ಬೀಟೆ ಮರದ ದೊಡ್ಡ ದೊಡ್ಡ ನಾಟಾಗಳನ್ನು ಕಳ್ಳತನದಿಂದ ಸಾಗಾಟ ಮಾಡಿರುವದು ಕಂಡುಬಂದಿದೆ.
ಉಳಿದ ನಾಟಾಗಳನ್ನು ಕಾಣದಂತೆ ಮುಚ್ಚಿದ್ದು, ಎಸ್ಟೇಟ್ನ ಮಾಲೀಕರ ಸೂಚನೆಯಂತೆ ಮರಕಳ್ಳರು ಸಿಲ್ವರ್ ಹಾಗೂ ಇನ್ನಿತರ ಮರಗಳೊಂದಿಗೆ ಬೀಟೆ ಮರವನ್ನು ಕಡಿದು ಮಾರಾಟ ಮಾಡಿರುವದಲ್ಲದೆ, ಮಾರಾಟ ಮಾಡಲು ಸಂಗ್ರಹಿಸಿ ಟ್ಟಿರುವದು ದೃಢಪಟ್ಟಿದೆ. ಸಂಗ್ರಹಿ¸ Àಲಾಗಿರುವ ಬೀಟೆ ಮರದ ನಾಟಾಗಳ ಮೌಲ್ಯ ಸುಮಾರು 2 ಲಕ್ಷ ರೂ.ಗಳಾಗಿದ್ದು, ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಡಿಸಿಐಬಿ ಎಎಸ್ಐ ಕೆ.ವೈ. ಹಮೀದ್, ಸಿಬ್ಬಂದಿಗಳಾದ ಕೆ.ಎಸ್. ಅನಿಲ್ ಕುಮಾರ್, ವಿ.ಜಿ. ವೆಂಕಟೇಶ್, ಕೆ.ಆರ್. ವಸಂತ, ಎಂ.ಎನ್. ನಿರಂಜನ್ ಮತ್ತು ಶಶಿಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.