ಗೋಣಿಕೊಪ್ಪ ವರದಿ, ಮೇ 11: ಪೊನ್ನಂಪೇಟೆ ಸಾಯಿಶಂಕರ್ ಕಾಲೇಜಿನಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. 25 ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದರು. ಅಂತಿಮ ಪದವಿ ವಿದ್ಯಾರ್ಥಿಗಳಾದ ಚೆಪ್ಪುಡೀರ ಅಯ್ಯಣ್ಣ, ಮುಕ್ಕಾಟಿರ ರಚನಾ ಹಾಗೂ ಎಂ.ಎಸ್. ವಿನಯ್ ಅವರುಗಳು ಆಯ್ಕೆಯಾಗಿದ್ದಾರೆ. ಪ್ರಾಂಶುಪಾಲೆ ಬೊಟ್ಟಂಗಡ ದಶಮಿ, ಭೋದಕಿ ಪಾರುವಂಗಡ ರಿಸ್ತಾ ಹಾಗೂ ಲೀಲಾವತಿ ಇದ್ದರು.