*ಗೋಣಿಕೊಪ್ಪಲು, ಮೇ 11: ಮಾಯಮುಡಿ ಸಮೀಪದ ಧನುಗಾಲ ಮುರುಡೇಶ್ವರ ಮತ್ತು ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಮುರುಡೇಶ್ವರ ಸ್ವಾಮಿಯ ಆಲಯದ 30 ನೇ ವರ್ಷದ ವಾರ್ಷಿಕೋತ್ಸವ ಬೆಳಿಗ್ಗೆ 7 ಗಂಟೆಯಿಂದ ಆರಂಭಗೊಳ್ಳಲಿದೆ. ಸುಬ್ರಮಣ್ಯ ಸ್ವಾಮಿ ಪೂಜೆ, ಮೃತ್ಯಂಜಯ ಸ್ವಾಮಿ ಪೂಜೆ, ಮುರುಡೇಶ್ವರ ಸ್ವಾಮಿ ಪೂಜೆ ನೆರವೇರಲಿದೆ. ಇದೇ ಸಂದರ್ಭದಲ್ಲಿ ಗ್ರಾಮೀಣ ಬಸವಜಯಂತಿ ಕಾರ್ಯಕ್ರಮವನ್ನು ಆಚರಿಸಲಾಗುವದು. ಮಧ್ಯಾಹ್ನ 3 ಗಂಟೆಗೆ ಮಹಾಸಭೆ ನಡೆಯಲಿದ್ದು ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ದೇವಸ್ಥಾನ ಸಮಿತಿಯ ಪ್ರಕಟಣೆ ತಿಳಿಸಿದೆ.