ಗೋಣಿಕೊಪ್ಪಲು, ಮೇ 11: ಗೋಣಿಕೊಪ್ಪಲು (ಕೈಕೇರಿ) ಕಾಲ್ಸ್ ಶಾಲಾ ಆವರಣದಲ್ಲಿ ನಿರ್ಮಿಸ ಲಾಗಿರುವ ಶ್ರೀ ವಿದ್ಯಾಗಣಪತಿ ದೇವಸ್ಥಾನ ದಶಮಾನೋತ್ಸವ ಅಂಗವಾಗಿ ತಾ. 14, 15, 16 ರಂದು ವಾರ್ಷಿಕ ಉತ್ಸವವನ್ನು ಅದ್ಧೂರಿ ಯಾಗಿ ಆಚರಿಸಲಿರುವದಾಗಿ ಕಾಲ್ಸ್ ಶಾಲಾ ಮುಖ್ಯಸ್ಥರಾದ ದತ್ತಾ ಕರುಂಬಯ್ಯ ಹಾಗೂ ಅಶ್ವಿನಿ ನಾಚಪ್ಪ ತಿಳಿಸಿದ್ದಾರೆ. ಇದೇ ಸಂದರ್ಭ ಆಂಜನೇಯ, ಸುಬ್ರಮಣ್ಯ ದೇವರ ಉತ್ಸವವನ್ನೂ ನಡೆಸಲಾಗುವದು.

ತಾ.16 ರಂದು ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 .30 ಗಂಟೆಯವರೆಗೆ ನವಚಂಡಿ ಹೋಮ, ತತ್ವಕಲಾ ಹೋಮ, ಪೂರ್ಣಾವುತಿ, ಕುಂಭಾಭಿಷೇಕ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಸಾಮೂಹಿಕ ಭೋಜನವಿದೆ ಎಂದು ತಿಳಿಸಿದ್ದಾರೆ.