ಗೋಣಿಕೊಪ್ಪ ವರದಿ, ಮೇ 11: ಹಳ್ಳಿಗಟ್ಟು ಎಂ.ಜಿ. ನಗರದ ಯುವ ಶಕ್ತಿ ಯುವಕ ಸಂಘದ ವತಿಯಿಂದ ಶೌರ್ಯ ಚಕ್ರ ಪಡೆದ ಯೋಧ ಹೆಚ್.ಎಸ್. ಮಹೇಶ್ ಅವರನ್ನು ಗೌರವಿಸಲಾಯಿತು. ಅಧ್ಯಕ್ಷ ಮನುಕುಮಾರ್, ಉಪಾಧ್ಯಕ್ಷ ಅಫ್ಸಲ್ ಬೇಗ್, ಕಾರ್ಯದರ್ಶಿ ಸಂತೋಷ್‍ಕುಮಾರ್, ಸಹ ಕಾರ್ಯದರ್ಶಿ ರಾಮಕೃಷ್ಣ ಹಾಗೂ ಸದಸ್ಯರು ಇದ್ದರು.