ಸುಂಟಿಕೊಪ್ಪ, ಮೇ 9: ಇಲ್ಲಿನ ಬ್ಲೂ ಬಾಯ್ಸ್ ಸಂಘದ ವತಿಯಿಂದ ಡಿ. ಶಿವಪ್ಪ ಜ್ಞಾಪಕಾರ್ಥಕವಾಗಿ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾಟವು ತಾ. 24 ರಿಂದ ಜೂ. 2ರ ವರೆಗೆ ಇಲ್ಲಿನ ಜಿಯಂಪಿ ಶಾಲಾ ಮೈದಾನದಲ್ಲಿ ನಡೆಯಲಿದೆ. ಕಳೆದ ವರ್ಷ ನಡೆಯ ಬೇಕಿದ್ದ ಪಂದ್ಯಾಟವನ್ನು ಪ್ರಕೃತಿ ವಿಕೋಪದಿಂದ ಮುಂದೂಡಿದ್ದು ಇದೀಗ 24 ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಆಸಕ್ತಿ ಇರುವ ತಂಡಗಳು ತಮ್ಮ ಹೆಸರನ್ನು ನೋಂದಾಯಿಸಲು ಬ್ಲೂ ಬಾಯ್ಸ್ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರ ಮೊ: 9448351459-8762245124 ಸಂಪರ್ಕಿಸುವಂತೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.