ಗೋಣಿಕೊಪ್ಪಲು, ಮೇ 9: ಗೋಣಿಕೊಪ್ಪಲುವಿನ ಕಸ ವಿಲೇವಾರಿ ಸಮಸ್ಯೆ ಮತ್ತಷ್ಟು ಕಗ್ಗಂಟಾಗುತ್ತಿ ದ್ದಂತೆಯೇ ತಾಲೂಕು ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರು, ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಹಾಗೂ ಗ್ರಾಮಸ್ಥರ ಸಭೆ ಕರೆದು ತುರ್ತು ಕ್ರಮದ ಬಗ್ಗೆ ಚರ್ಚಿಸಿದರು.ಪೊನ್ನಂಪೇಟೆ ಸಾಮಥ್ರ್ಯ ಸೌಧದ ಸಭಾಂಗಣದಲ್ಲಿ ತುರ್ತು ಸಭೆ ಕರೆದ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು ಕಸ ವಿಲೇವಾರಿಗೆ ಅಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಚರ್ಚಿಸಿದರು ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೊನ್ನಂಪೇಟೆ ಹೋಬಳಿ ಹಳ್ಳಿಗಟ್ಟು ಗ್ರಾಮದಲ್ಲಿ ಕಸ ವಿಲೇವಾರಿಗಾಗಿ ಕಾಯ್ದಿಟ್ಟ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡುತ್ತಿದ್ದ ಸಂದರ್ಭ ಸ್ಥಳೀಯರಿಂದ ವ್ಯಾಪಕ ವಿರೋಧ ಕಂಡು ಬಂತು. ಅಲ್ಲದೆ ಕಸ ವಿಲೇವಾರಿಯ ವಾಹನಗಳನ್ನು ತಡೆಹಿಡಿದಿದ್ದಾರೆ ಎಂದು ಮಾಹಿತಿ ಒದಗಿಸಿದರು. ಈ ಸಂದರ್ಭ ಮಾತನಾಡಿದ ಹಳ್ಳಿಗಟ್ಟು ನಿವಾಸಿ ತಾಯಮ್ಮ ಆನೇಕ ವರ್ಷಗಳಿಂದ ನಾವು ವಾಸವಾಗಿದ್ದೇವೆ. ಕಸವನ್ನು ಹಾಕುವದರಿಂದ ಮಕ್ಕಳಿಗೆ ಗ್ರಾಮಸ್ಥರಿಗೆ ರೋಗ ರುಜಿನಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಆದ್ದರಿಂದ ಯಾವದೇ ಕಾರಣಕ್ಕೂ ಕಸ ವಿಲೇವಾರಿಗೆ ಅವಕಾಶ ಕಲ್ಪಿಸುವದಿಲ್ಲವೆಂದು ಹೇಳಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರು ಈ ಜಾಗದಲ್ಲಿ ಕಸ ವಿಲೇವಾರಿಗಾಗಿ ಮೂರು ಪಂಚಾಯಿತಿಗಳಾದ ಗೋಣಿಕೊಪ್ಪ, ಅರುವತೊಕ್ಲು ಹಾಗೂ ಪೊನ್ನಂಪೇಟೆಗೆ ಮೀಸಲಾಗಿರಿಸಿದೆ. ಬೇರೆ ಎಲ್ಲಿಯೂ ಜಾಗ ಇಲ್ಲ ಈ ಸ್ಥಳಕ್ಕಾಗಿ ಲಕ್ಷಾಂತರ ಹಣವನ್ನು ವಿನಿಯೋಗ ಮಾಡಲಾಗಿದೆ. ಕಸ ವಿಲೇವಾರಿಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು. ಆದರೆ ಇವರ ಮನವಿಗೆ ಗ್ರಾಮಸ್ಥರೆಲ್ಲರೂ ಒಕ್ಕೂರಲಿನಿಂದ ವಿರೊಧ ವ್ಯಕ್ತಪಡಿಸಿ ಆರುವತೋಕ್ಲು ಪಂಚಾಯಿತಿ

(ಮೊದಲ ಪುಟದಿಂದ) ಕಸ ಹೊರತುಪಡಿಸಿ ಇನ್ನು ಎರಡು ಪಂಚಾಯ್ತಿಯ ಕಸ ವಿಲೇವಾರಿಗೆ ಅವಕಾಸ ಕಲ್ಪಿಸುವದಿಲ್ಲ. ವಾಹನಗಳಲ್ಲಿ ಬರುವ ಕಸಗಳನ್ನು ತಡೆಹಿಡಿದು ಪ್ರತಿಭಟಿಸಲಾಗುವದು ಎಂದರು.

ಅಂತಿಮವಾಗಿ ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ. ಬೋಪಣ್ಣ, ಸಮಸ್ಯೆಯ ಇತ್ಯರ್ಥಕ್ಕೆ ಪೊನ್ನಂಪೇಟೆ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಜಾ ಸಾಜಿ ಅಚ್ಚುತ್ತನ್ ಹಾಗೂ ಕಾರ್ಯ ನಿರ್ವಹಣಾಧಿಕಾರಿ ಗಳ ಸಮ್ಮುಖದಲ್ಲಿ ತಕ್ಷಣ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳನ್ನು ಭೇಟಿ ಮಾಡಿ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದರು. ಸಭೆಯಲ್ಲಿ ಪೊನ್ನಂಪೇಟೆ ಜಿ.ಪಂ.ಸದಸ್ಯೆ ಶ್ರೀಜಾ ಸಾಜಿ ಅಚ್ಚುತ್ತನ್, ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮೂಕಳೇರ ಸುಮಿತಾ ಗಣೇಶ್,ಉಪಾಧ್ಯಕ್ಷೆ ಮಂಜುಳ ಸುರೇಶ್, ಗೋಣಿಕೊಪ್ಪ ಗ್ರಾಮ ಪಂಚಾಯ್ತಿ ಸದಸ್ಯರಾದ ರಾಮಕೃಷ್ಣ,ಬಿ.ಎನ್.ಪ್ರಕಾಶ್, ರಾಜಶೇಖರ್ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಾದ ಚಂದ್ರಮೌಳಿ, ಪುಟ್ಟರಾಜು, ಶಂಕರನಾರಾಯಣ, ಗ್ರಾಮದ ಮುಖಂಡರುಗಳಾದ ಎಂ.ಎ.ಅಪ್ಪಯ್ಯ, ಡಾ.ಕಾವೇರಿ ಎಂ.ಎನ್.ದೇವಯ್ಯ, ಬಹುಜನ ಕಾರ್ಮಿಕ ಸಂಘದ ಅಧ್ಯಕ್ಷ ಕೆ. ಮೊಣ್ಣಪ್ಪ,ಮತ್ತಿತರು ಹಾಜರಿದ್ದರು. ’ಶಕ್ತಿ’ಯಲ್ಲಿ ಇಲ್ಲಿನ ಸಮಸ್ಯೆಗಳ ಬಗ್ಗೆ ಸಚಿತ್ರ ವರದಿ ಪ್ರಕಟಿಸಿದನ್ನು ಇಲ್ಲಿ ಸ್ಮರಿಸಬಹುದು. -ಹೆಚ್.ಕೆ.ಜಗದೀಶ್