ಮಡಿಕೇರಿ, ಮೇ 9: ಶ್ರೀನಾರಾಯಣ ಧರ್ಮ ಪರಿಪಾಲನಾ ಯೋಗಂ ಮಡಿಕೇರಿ ಶಾಖೆ ವತಿಯಿಂದ ನಗರದ ಹೊಟೇಲ್ ಸಮುದ್ರ ಸಭಾಂಗಣದಲ್ಲಿ ಮಳೆಹಾನಿ ಸಂತ್ರಸ್ತರಿಗೆ ಪರಿಹಾರ ವಿತರಣಾ ಕಾರ್ಯಕ್ರಮ ನಡೆಯಿತು.
ಲೆಕ್ಕ ಪರಿಶೋಧಕ ಹಾಗೂ ಸಂಘದ ಸದಸ್ಯ ಟಿ.ಕೆ. ಸುಧೀರ್ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆಯ ಮಾಜಿ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಹಾಜರಿದ್ದರು. ಸಂತ್ರಸ್ತರಿಗೆ ತಲಾ 5 ಸಾವಿರ ರೂ. ಗಳಂತೆ ಒಟ್ಟು 45 ಸಾವಿರ ಪರಿಹಾರ ಚೆಕ್ ವಿತರಿಸಲಾಯಿತು. ಅಲ್ಲದೆ ಮಡಿಕೇರಿ ಸಹಕಾರ ಪಟ್ಟಣ ಬ್ಯಾಂಕ್ ಅಧ್ಯಕ್ಷ ಸಿ.ಕೆ. ಬಾಲಕೃಷ್ಣ ಹಾಗೂ ನಿರ್ದೇಕ ಆರ್. ಗಿರೀಶ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಮಡಿಕೇರಿ ಶಾಖೆ ಅಧ್ಯಕ್ಷ ಟಿ.ಆರ್. ವಾಸುದೇವ, ಉಪಾಧ್ಯಕ್ಷ ಮಾಧವನ್ ಮತ್ತಿತರರು ಹಾಜರಿದ್ದರು.