ಮಡಿಕೇರಿ, ಮೇ 9: ಸೋಮವಾರಪೇಟೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ 5 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುವ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಿದೆ.

ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ, ಶಿರಂಗಾಲ, ಕುಶಾಲನಗರ, ಆಲೂರು-ಸಿದ್ದಾಪುರ, ಸುಂಟಿಕೊಪ್ಪ ಮತ್ತು ಚೆಟ್ಟಳ್ಳಿ ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳು ಮತ್ತು ಆಲೂರು-ಸಿದ್ದಾಪುರದ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ 5 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಪ್ರವರ್ಗ-1, 2ಎ, 3ಎ, 3ಬಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಪ್ರವರ್ಗ-1, 2ಎ, 3ಎ, 3ಬಿ, ವಾರ್ಷಿಕ ಆದಾಯ ರೂ. 44500 ಆಗಿರುತ್ತದೆ. ಪ್ರವರ್ಗ 1 ರ ವಿದ್ಯಾರ್ಥಿಗಳಿಗೆ ವಾರ್ಷಿಕ ಆದಾಯ ಮಿತಿ ರೂ. 1 ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ರೂ. 2 ಲಕ್ಷ ಆಗಿರುತ್ತದೆ. ಪ್ರವೇಶದ ಅರ್ಜಿಯೊಂದಿಗೆ ಜಾತಿ ಹಾಗೂ ಆದಾಯ ದೃಢೀಕರಣ. ಹಿಂದಿನ ಸಾಲನಲ್ಲಿ ಉತ್ತೀರ್ಣರಾದ ಬಗ್ಗೆ ಅಂಕಪಟ್ಟಿ. ವಾಸಸ್ಥಳ ದೃಢೀಕರಣ ಪತ್ರ, 4 ಪಾಸ್‍ಪೋರ್ಟ್ ಪೋಟೋಗಳನ್ನು ಭರ್ತಿ ಮಾಡಿದ ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು. (ನವೀಕರಣ ವಿದ್ಯಾರ್ಥಿಗಳಿಗೆ ದಿ 1.6.2019 ರಿಂದಲೇ ಪ್ರಾರಂಭವಾಗುವದು) ಹೊಸದಾಗಿ ಪ್ರವೇಶ ಕೋರಿ ಅರ್ಜಿ ಸಲ್ಲಿಸಲು ಜೂನ್ 20 ಕೊನೆಯ ದಿನವಾಗಿದೆ. ಅರ್ಜಿ ಫಾರಂಗಳನ್ನು ಸಂಬಂಧಿಸಿದ ವಿದ್ಯಾರ್ಥಿ ನಿಲಯಗಳಲ್ಲಿ ವಿತರಣೆ ಮಾಡಲಾಗುವದು.

ವಿದ್ಯಾರ್ಥಿ ನಿಲಯಗಳಲ್ಲಿ ಉಚಿತವಾಗಿ ಊಟ, ವಸತಿ, ನೋಟ್ ಪುಸ್ತಕ, ಸಮವಸ್ತ್ರ, ಬಾಲಕರಿಗೆ ಶುಚಿ ಸಂಭ್ರಮ ಕಿಟ್, ಬಾಲಕಿಯರಿಗೆ ಸಿರಿಗಂಧ ಕಿಟ್ ಒದಗಿಸಲಾಗುವದು. ತಲೆಕ್ಷೌರ, ಬಿಸಿ ನೀರಿನ ವ್ಯವಸ್ಥೆ, ಗ್ರಂಥಾಲಯ, ಕಂಪ್ಯೂಟರ್, ಕ್ರೀಡಾ ಸಾಮಗ್ರಿಗಳು, ಓದಲು ಕನ್ನಡ ಮತ್ತು ಇಂಗ್ಲೀಷ್ ದಿನ ಪತ್ರಿಕೆ ಒದಗಿಸಲಾಗುವದು. ಅಂಶಕಾಲಿಕ ಭೋದಕರಿಂದ ವಿಶೇಷ ಭೋದನಾ ತರಗತಿಗಳನ್ನು ನಡೆಸಲಾಗುವದು. 10ನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಥಮ ಯತ್ನದಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಧನ ರೂ. 1000 ಇತ್ಯಾದಿ ಸೌಲಭ್ಯಗಳನ್ನು ನೀಡಲಾಗುವದು.

ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು ಹಾಗೂ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಸೋಮವಾರಪೇಟೆ ಇವರನ್ನು ಹಾಗೂ ದೂರವಾಣಿ ಸಂಖ್ಯೆ 08276-284820 ನ್ನು ಸಂಪರ್ಕಿಸಬಹುದು.