ಸುಂಟಿಕೊಪ್ಪ, ಮೇ 9: ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡು ಬಾಡಿಗೆ ಮನೆಯಲ್ಲಿರುವ ನಿರಾಶ್ರಿತರು ಈ ಮಳೆಗಾಲಕ್ಕೆ ಮುನ್ನ ಸರಕಾರ ನಿರ್ಮಿಸುತ್ತಿರುವ ಮನೆ ಸಿಗಬಹುದೋ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಮಾದಾಪುರ ಗ್ರಾಮ ಪಂಚಾಯಿತಿಯ ಜಂಬೂರಿನಲ್ಲಿ 318 ಮನೆ ನಿರ್ಮಿಸುವ ಗುರಿ ಹೊಂದಿದ್ದು, ಕರ್ನಾಟಕ ರಾಜೀವ್ ಗಾಂಧಿ ವಸತಿ ನಿಗಮದಿಂದ ಪ್ರತಿ ಮನೆಗೆ ರೂ. 9.85 ಲಕ್ಷ ವೆಚ್ಚದಂತೆ ಕಾಮಗಾರಿ ಸಾಗಿದೆ.
ಈಗಾಗಲೇ 73 ಮನೆಯ ಕಾಮಗಾರಿ ಶೇ. 80 ರಷ್ಟು ಪೂರ್ಣಗೊಂಡಿದ್ದು, ಜುಲೈ ತಿಂಗಳಿನಲ್ಲಿ 60 ಮನೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಫಲಾನುಭವಿಗಳ ಬಳಕೆಗೆ ಲಭ್ಯವಾಗಲಿದೆ ಎಂದು ರಾಜೀವ್ ಗಾಂಧಿ ವಸತಿ ನಿಗಮದ ಇಂಜಿನಿಯರ್ ರಾಜೇಂದ್ರ ತಿಳಿಸಿದ್ದಾರೆ.
ಕರ್ಣಂಗೇರಿ, ಮದೆನಾಡುವಿನಲ್ಲೂ ರಾಜೀವ್ ಗಾಂಧಿ ವಸತಿ ನಿಗಮದಿಂದಲೂ ಪಕೃತಿ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಕಾಮಗಾರಿ ಸಾಗುತ್ತಿರುವದಾಗಿ ತಿಳಿಸಿದ್ದಾರೆ.