ಕೂಡಿಗೆ, ಮೇ 9: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯದಿಂದ ಚಿಕ್ಕಅಳುವಾರದಮ್ಮ ದೇವಸ್ಥಾನಕ್ಕೆ ಕ್ಷೇತ್ರದಿಂದ ಮಂಜೂರಾದ ರೂ. 50 ಸಾವಿರದ ಡಿ.ಡಿ.ಯನ್ನು ಸೋಮವಾರಪೇಟೆ ತಾಲೂಕಿನ ಯೋಜನಾಧಿಕಾರಿ ಪ್ರಕಾಶ್ ವೈ, ದೇವಸ್ಥಾನದ ಪದಾಧಿಕಾರಿಗಳಾದ ಪುಟ್ಟಸ್ವಾಮಿ ಹಾಗೂ ಶಿವಶಂಕರ್ ಅವರಿಗೆ ವಿತರಣೆ ಮಾಡಿದರು.

ಈ ಸಂದರ್ಭ ದೇವಸ್ಥಾನ ಸಮಿತಿ ಸದಸ್ಯರಾದ ಸುರೇಶ, ರತ್ನಣ್ಣ, ಮಾದೇವ, ಶಂಕರ್ ಹಾಗೂ ಒಕ್ಕೂಟದ ಅಧ್ಯಕ್ಷ ಸುರೇಶ, ಕಾರ್ಯದರ್ಶಿ ಪ್ರೇಮ, ಸೇವಾಪ್ರತಿನಿಧಿ ಸುಮಲತಾ ಹಾಗೂ ಗ್ರಾಮಸ್ಥರು ಹಾಜರಿದ್ದರು.