ಚೆಟ್ಟಳ್ಳಿ, ಮೇ 9: ಅರಬ್ ದೇಶದಲ್ಲಿ ತಮ್ಮ ಜೀವನ ಕಟ್ಟಿಕೊಳ್ಳಲು ನೂರಾರು ಕನಸುಗಳೊಂದಿಗೆ ಏಳು ಸಾಗರ ದಾಟಿ ಮರಳುಗಾಡಿನಲ್ಲಿ ಬಂದ ಕರುನಾಡಿನ ಸಾವಿರಾರು ಯುವಕ-ಯುವತಿಯರಿಗೆ ಕೊಡಗು ಹಳೆ ವಿದ್ಯಾರ್ಥಿಗಳ ಸಂಘ ದುಬೈ ಮತ್ತು ಹೆಮ್ಮೆಯ ಯುಎಇ ಕನ್ನಡಿಗರು-ದುಬೈ ಇವರಿಗೆ ಇಂಟವ್ರ್ಯೂ ಗೈಡೆನ್ಸ್ ಮತ್ತು ಜಾಬ್ ಫೇರ್ ಕಾರ್ಯಾಗಾರವನ್ನು ಪರ್ಲ್ ಸಿಟಿ ಸೂಟ್ಸ್ ಹೊಟೇಲ್ ಸಭಾಂಗಣದಲ್ಲಿ ಏರ್ಪಡಿಸಿತ್ತು.

ಕಾರ್ಯಕ್ರಮಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ವಿವಿಧ ಎಮಿರೇಟುಗಳಿಂದ ನೂರಕ್ಕಿಂತಲೂ ಹೆಚ್ಚು ಕೆಲಸ ಹುಡುಕಲು ಬಂದ ಕನ್ನಡಿಗ ಜನರು ಪಾಲ್ಗೊಂಡಿದ್ದರು. ನುರಿತ ತರಬೇತುದಾರರಿಂದ ಜಾಬ್ ಇಂಟವ್ರ್ಯೂ ಹೇಗೆ ಎದುರಿಸಬೇಕು, ಯಾವ ರೀತಿಯಲ್ಲಿ ಯಾವ ಯಾವ ಕಡೆಗಳಲ್ಲಿ ಕೆಲಸಕ್ಕೆ ಅರ್ಜಿ ಹಾಕಬೇಕು ಮುಂತಾದ ಹತ್ತು ಹಲವು ವಿಷಯದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

ಕಾರ್ಯಕ್ರಮದ ಇನ್ನೊಂದು ಭಾಗವಾದ ಜಾಬ್ ಫೇರ್-2019 ರಲ್ಲಿ ರಿಕ್ರೂಟರ್ ಪ್ರಸನ್ನಾ ಮತ್ತು ಟೋನಿ ಮತ್ತು ಬೇರೆ ಕನ್ನಡಿಗ ವ್ಯಾಪರಸ್ಥರು ತಮ್ಮ ಕಂಪನಿಗಳಿಗೆ 16ಕ್ಕಿಂತಲೂ ಹೆಚ್ಚು ಕನ್ನಡಿಗರಿಗೆ ಸ್ಥಳದಲ್ಲೇ ಜಾಬ್ ಆಫರ್ ನೀಡಿದಲ್ಲದೆ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಕೆಲಸ ಕೊಡಿಸುವ ಭರವಸೆ ನೀಡಿದರು.

ಈ ಸಂದರ್ಭ ಸೆಂತಲ್, ಮಧು, ಶಶಿಧರ್, ಪಲ್ಲವಿ, ಮಮತಾ, ಅನಿತಾ ಇದ್ದರು.