ಮಡಿಕೇರಿ, ಮೇ 9: ಇಲ್ಲಿನ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತ್ಯೋತ್ಸವ ವನ್ನು ಇಂದು ವಿಶೇಷ ಪೂಜೆ ಪಾರಾಯಣಗಳೊಂದಿಗೆ ಆಚರಿಸಲಾ ಯಿತು. ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ಈ ಪ್ರಯುಕ್ತ ನರಸಿಂಹ ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.
ಶಂಕರ ಜಯಂತಿ ಪ್ರಯುಕ್ತ ವಿಪ್ರ ಬಳಗದಿಂದ ರುದ್ರ ಪಾರಾಯಣ, ಮಹಿಳೆಯರು ಹಾಗೂ ಮಕ್ಕಳಿಂದ ಶಂಕರ ಸ್ತೋತ್ರದೊಂದಿಗೆ ಗಣೇಶ ಪಂಚರತ್ನಮ್, ಏಕಶ್ಲೋಕೀ, ದಶ ಶ್ಲೋಕೀ, ಶ್ರೀ ಲಲಿತಪಂಚರತ್ನಮ್, ಗುರುವಷ್ಟಕಮ್, ನಿರ್ವಾಣವಷ್ಟಕಮ್, ಶಾರದಾ ಭುಜಂಗ ಪ್ರಯಾತಷ್ಟಕಮ್, ಸೌಂದರ್ಯ ಲಹರೀ, ದೇವಿ ಅಪರಾಧಕ್ಷಮಾಪಣಾ ಸ್ತೋತ್ರ ಮುಂತಾದ ಪಾರಾಯಣ ಜರುಗಿತು.
ಕೊಡಗು ಬ್ರಾಹ್ಮಣ ವಿದ್ಯಾನಿಧಿ ವತಿಯಿಂದ ಧಾರ್ಮಿಕ ಕೈಂಕರ್ಯ ಗಳೊಂದಿಗೆ ಕೂಡಿಗೆ ದುರ್ಗಾ ಪರಮೇಶ್ವರಿ ದೇಗುಲದ ಅರ್ಚಕ ಪರಮೇಶ್ವರ ಭಟ್ ಉಪನ್ಯಾಸ ನೀಡಿದರು. ಸಮಾಜದ ವಿವಿಧ ಪ್ರಮುಖರು ಹಾಗೂ ಬಂಧುಭಗಿನಿ ಯರು, ಮಕ್ಕಳು ಪಾಲ್ಗೊಂಡಿದ್ದರು. ವಿಶೇಷ ಪೂಜೆ, ಉಪನ್ಯಾಸ, ಪಾರಾಯಣ ಬಳಿಕ ಸಹಭೋಜನ ಏರ್ಪಡಿಸಲಾಗಿತ್ತು.