ಕೂಡಿಗೆ, ಮೇ 7: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಜೇನುಕಲ್ಲುಬೆಟ್ಟದಲ್ಲಿರುವ ಕಾಡು ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವು ಶ್ರದ್ಧಾಭಕ್ತಿಯಿಂದ ನೆರವೇರಿತು.
ಶ್ರೀಸ್ವಾಮಿಗೆ ಬೆಳಿಗ್ಗೆ ಗಂಗಾಭಿಷೇಕ ನೆರವೇರಿಸಿ ವಿಶೇಷ ಪೂಜೆಗಳು ಹಾಗೂ ಹೋಮಹವನಗಳು ನಡೆದವು.
ನಂತರ ಭಕ್ತರಿಗೆ ತೀರ್ಥಪ್ರಸಾದ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಪೂಜೋತ್ಸವದಲ್ಲಿ ಸೀಗೆಹೊಸೂರು, ಮಲ್ಲೇನಹಳ್ಳಿ, ಭುವನಗಿರಿ, ಜೇನುಕಲ್ಲುಬೆಟ್ಟ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಭಕ್ತರು ಪಾಲ್ಗೊಂಡಿದ್ದರು.
ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೃಷ್ಣ, ಕಾರ್ಯದರ್ಶಿ ಬಸವರಾಜು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಇದ್ದರು.
ಪೂಜಾ ವಿಧಿವಿಧಾನಗಳನ್ನು ಕೆ.ಸಿ.ನಂಜುಂಡಸ್ವಾಮಿ, ಚಂದ್ರಮೌಳಿ ಆರಾಧ್ಯ ನೆರವೇರಿಸಿದರು.