*ಗೋಣಿಕೊಪ್ಪಲು, ಮೇ 8: ಜೇನು ಕುರುಬ ಆದಿವಾಸಿಗಳ ಎರಡನೇ ವರ್ಷದ ಚಿಕ್ಮನೆ ಟೆನ್ನಿಸ್ ಬಾಲ್ ಕ್ರಿಕೆಟ್ ಕಪ್ ಪಂದ್ಯಾಟಕ್ಕೆ ಅದ್ದೂರಿ ಚಾಲನೆ ದೊರೆಯಿತು. ತಿತಿಮತಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜೇನು ಕುರುಬ ಸಂಘದ ವತಿಯಿಂದ ಐದು ದಿನಗಳು ನಡೆಯುವ ಕ್ರಿಕೇಟ್ ಪಂದ್ಯಾಟಕ್ಕೆ ಚೆನ್ನಯ್ಯನಕೊಟೆ ಗ್ರಾ.ಪಂ. ಸದಸ್ಯ ಅಪ್ಪಾಜಿ ಚಾಲನೆ ನೀಡಿದರು. ಐದು ದಿನಗಳ ಕ್ರಿಕೆಟ್ ಪಂದ್ಯಾಟದಲ್ಲಿ ಜಿಲ್ಲೆಯ ಕುರುಬ ಜನಾಂಗ ಹಾಗೂ ಆಧಿವಾಸಿ ಸಮುದಾಯದ ಸುಮಾರು 60 ತಂಡಗಳು ಭಾಗವಹಿಸಲಿದೆ.
ಕ್ರೀಡಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅಪ್ಪಾಜಿ ಆರೋಗ್ಯ ಕಾಪಾಡಿಕೊಳ್ಳಲು ಯುವಕರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಪೆÇನ್ನಂಪೇಟೆ ಠಾಣಾ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಹೊಂಬಾಳಯ್ಯ ಮಾತನಾಡಿ, ಮನಸ್ಸಿನ ಉಲ್ಲಾಸಕ್ಕೆ ಕ್ರೀಡೆ ಸಹಕಾರಿ, ಸೋಲು, ಗೆಲವು ಆಟಗಾರರಿಗೆ ಮುಖ್ಯವಾಗಬಾರದು. ಕ್ರೀಡೆಯಲ್ಲಿ ಭಾಗವಹಿಸುವದಕಷ್ಟೆ ಪ್ರಾಮುಖ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಮಾಯಮುಡಿ ಗ್ರಾ.ಪಂ. ಸದಸ್ಯ ಮಣಿ ಕುಂಞ, ತಿತಿಮತಿ ಜೇನು ಕುರುಬ ಯುವಕ ಸಂಘದ ಅಧ್ಯಕ್ಷ ರಘು, ಪ್ರಾಥಮಿಕ ಶಾಲಾ ಶಿಕ್ಷಕಿ ರಾಣಿ, ಪೆÇಲೀಸ್ ಸಿಬ್ಬಂದಿ ಯೋಗೇಶ್, ಜೇನು ಕುರುಬ ಸಂಘದ ಕಾರ್ಯದರ್ಶಿ ಜೆ.ಟಿ. ಅಯ್ಯಪ್ಪ, ಉಪಾಧ್ಯಕ್ಷ ಮನು, ಸಹಕಾರ್ಯದರ್ಶಿ ಸತೀಶ್, ತಿತಿಮತಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಅಪೆÇ್ರೀಜ್û ಉಪಸ್ಥಿತರಿದ್ದರು.