*ಗೋಣಿಕೊಪ್ಪಲು, ಮೇ 7 : ತಾವೂರು ಮಹಿಷಾಸುರ ಮರ್ದಿನಿ ಉತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು. ಸಾವಿರಾರು ಭಕ್ತಾದಿಗಳು ಪೂಜೆ, ಹರಕೆ ಅರ್ಪಿಸಿ ದೇವರ ಕೃಪೆಗೆ ಪಾತ್ರರಾದರು.
ಉತ್ಸವದ ಪ್ರಯುಕ್ತ ಏಳು ದಿನಗಳು ಗ್ರಾಮದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ದೇವಿಯ ಅವಭೃತ ಸ್ನಾನದೊಂದಿಗೆ ಭಗಂಡೇಶ್ವರ ಸನ್ನಿಧಿಯಲ್ಲಿ ದರ್ಶನ ನೃತ್ಯ ಬಲಿ, ವಸಂತ ಪೂಜೆ ನಡೆದವು. ತಾ. 10ರಂದು ಮಹಿಷಾಸುರ ಮರ್ದಿನಿ ಸನ್ನಿದಿಯ ಆವರಣದಲ್ಲಿ ಚಾಮುಂಡಿ ತೆರೆ ನಡೆಯುವದಾಗಿ ದೇವಸ್ಥಾನದ ಅಧ್ಯಕ್ಷ ಹೊಸಗದ್ದೆ ಎ. ಭಾಸ್ಕರ ತಿಳಿಸಿದ್ದಾರೆ. ಈ ಸಂದರ್ಭ ಕಾರ್ಯದರ್ಶಿ ಗೌಡುದಾರೆ ಜಿ. ಯದುಕುಮಾರ್, ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಭಾಗವಹಿಸಿದರು.