ವೀರಾಜಪೇಟೆ, ಮೇ 7: ದೇವಣಗೇರಿಯ ಪ್ಲಾಂಟರ್ಸ್ ಕ್ಲಬ್ ವತಿಯಿಂದ ದೇವಣಗೇರಿ ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ಜಮ್ಮಾ ಕುಟುಂಬಗಳ ನಡುವೆ ಆಯೋಜಿಸಲಾಗಿದ್ದ ಫೈವ್‍ಸ್ಯೆಡರ್ಸ್ ಫುಟ್ಬಾಲ್ ನಾಕೌಟ್ ಪಂದ್ಯಾವಳಿಯಲ್ಲಿ ಐಚಂಡ, ಪುಟ್ಟಿಚಂಡ, ಚೆಕ್ಕೆರ, ಒಕ್ಕಲಿಗರ, ಐಮಂಡ, ಬೊಳ್ಳಚೆಟ್ಟಿರ ತಂಡಗಳು ಮುಂದಿನ ಸುತ್ತಿನ ಪ್ರವೇಶ ಪಡೆದುಕೊಂಡಿವೆ.

ಐಚಂಡ ತಂಡ ಮಂಡೇಟ್ಟಿರ ತಂಡವನ್ನು 5-4 ಗೋಲುಗಳಿಂದ ಪರಾಭವ ಗೊಳಿಸಿತು. ಪುಟ್ಟಿಚಂಡ ತಂಡ ಮಾಳೇಟಿರ ತಂಡವನ್ನು 1-0 ಗೋಲಿನಿಂದ ಮಣಿಸಿತು. ಚೌರೀರ ತಂಡ ಬಾರದ ಕಾರಣ ಆಯೊಜಕರು ಚೆಕ್ಕೆರ ತಂಡವನ್ನು ವಿಜಯಿ ಎಂದು ಘೋಷಿಸಿದರು. ಒಕ್ಕಲಿಗರ ತಂಡ 7-1 ಗೋಲುಗಳಿಂದ ಕೂವಲೆರ ತಂಡವನ್ನು ಮಣಿಸಿತು. ಪಾಸುರ ತಂಡ ಬಾರದ ಕಾರಣ ಆಯೋಜಕರು ಐಮಂಡ ತಂಡವನ್ನು ವಿಜಯಿ ಎಂದು ಘೋಷಿಸಿದರು. ಬೊಳ್ಳಚೆಟ್ಟಿರ ತಂಡವು 3-2 ಗೋಲುಗಳಿಂದ ಪಾಣತ್ತಲೆ ತಂಡವನ್ನು ಪರಾಭವ ಗೊಳಿಸಿತು.

ತೀರ್ಪುಗಾರರಾಗಿ ಕಾರೇರ ನೀಲ್ ಸೋಮಯ್ಯ, ಕಾಂಡಂಡ ಕುಶಾಲಪ್ಪ ಕಾರ್ಯ ನಿರ್ವಹಿಸಿದರು.