ಸಿದ್ದಾಪುರ, ಮೇ 7: ಸಾಗರ್ ಯುವಕ ಸಂಘದ ವತಿಯಿಂದ ಚೆನ್ನಯ್ಯನಕೋಟೆ ಶಾಲಾ ಮೈದಾನದಲ್ಲಿ ಮುಕ್ತ ಕ್ರಿಕೆಟ್ ಪಂದ್ಯಾಟಕ್ಕೆ ಜಿ.ಪಂ. ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಚಾಲನೆ ನೀಡಿದರು. ಕ್ರೀಡೆ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅನಿವಾರ್ಯವಾಗಿದ್ದು, ಕ್ರೀಡಾಕೂಟಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದರು. ಕೆ.ಸಿ.ಎಲ್ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ಕ್ರೀಡೆಯಿಂದ ಪರಸ್ಪರ ಭಾಂದವ್ಯ ವೃದ್ಧಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಗೀತಾ, ಸದಸ್ಯರಾದ ಹೆಚ್.ಎಸ್. ಗಣೇಶ್, ಸಾಗರ್ ಯುವಕ ಸಂಘದ ಅಧ್ಯಕ್ಷ ಹುರೈಸ್, ಗೌರವಾಧ್ಯಕ್ಷ ರದೀಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ ದಿನೇಶ್ ಸೇರಿದಂತೆ ಇನ್ನಿತರರು ಇದ್ದರು.