ವೀರಾಜಪೇಟೆ, ತಾ. 6: ಕೆದಮುಳ್ಳೂರು ಕ್ರಿಕೆಟ್ ಕ್ಲಬ್ ವತಿಯಿಂದ 3ನೇ ವರ್ಷದ ಸೂಪರ್ ನೈನ್ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾಟವನ್ನು ತಾ. 10ರಿಂದ 12ರವರೆಗೆ ಕೆದಮುಳ್ಳೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಸಲಾಗುತ್ತಿದೆ ಎಂದು ಪಂದ್ಯಾಟದ ಸಂಚಾಲಕ ಲಿತನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿಜೇತ ತಂಡಗಳಿಗೆ 25 ಸಾವಿರ ನಗದು ಟ್ರೋಫಿ, ದ್ವಿತೀಯ ಬಹುಮಾನ 12.500 ನಗದು ಹಾಗೂ ಟ್ರೋಫಿ ನೀಡಲಾಗುವದು. ಕಾರ್ಯಕ್ರಮವನ್ನು ಪೂರ್ವಾಹ್ನ 9 ಗಂಟೆಗೆ ಕಾಕೋಟುಪರಂಬು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಉದ್ಘಾಟಿಸಲಿದ್ದಾರೆ. ಪಂದ್ಯಾವಳಿಯು 4 ಓವರುಗಳಿಗೆ ಸೀಮಿತವಾಗಿದೆ. ಉತ್ತಮ ಬ್ಯಾಟ್ಸ್‍ಮೆನ್, ಉತ್ತಮ ಬೌಲರ್ ಪ್ರಶಸ್ತಿ ನೀಡಲಾಗುವದು. ಹೆಸರನ್ನು ನೋಂದಾಯಿಸಿ ಕೊಳ್ಳುವವರು ಗುರುರಾಜ್ (9482246941), ಜಗದೀಶ್ (8762589441) ಇವರನ್ನು ಸಂಪರ್ಕಿಬಹುದಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಜಗದೀಶ್, ಗುರುರಾಜ್, ಉಪಸ್ಥಿತರಿದ್ದರು.