ಗುಡ್ಡೆಹೊಸೂರು, ಮೇ. 7: ಇಲ್ಲಿಗೆ ಸಮೀಪದ ಬಸವನಹಳ್ಳಿ (ಹೊಸಕಾಡು)ವಿನ 4ನೇ ವರ್ಷದ ವಾರ್ಷಿಕೋತ್ಸವವು ಅದ್ಧೂರಿಯಾಗಿ ನಡೆಯಿತು. ತಾ. 3 ಹಾಗೂ 4ರಂದು ವಾರ್ಷಿಕೋತ್ಸವ ಅಂಗವಾಗಿ ದೇವಸ್ಥಾನ ದಲ್ಲಿ ಕುಟ್ಟಿಚಾತನ್, ವಿಷ್ಣುಮೂರ್ತಿ, ಶ್ರೀ ಚಾಮುಂಡೇಶ್ವರಿ ದೈವಗಳ ತೆರೆ ಮಹೋತ್ಸವ, ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ಶ್ರೀಕುಟ್ಟಿಚಾತನ್ ವೆಳ್ಳಾಟಂ ನಡೆಯಿತು.