ಸುಂಟಿಕೊಪ್ಪ, ಮೇ 7: ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿಗೆ ಪ್ರವೇಶಾತಿ ಆರಂಭಗೊಂಡಿದೆ. ಮೊದಲು ಸೇರ್ಪಡೆಗೊಳ್ಳುವ 10 ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗಕ್ಕೆ ಕಾಲೇಜಿನ ಉಪನ್ಯಾಸಕ ವೃಂದದವರಿಂದ ಕಾಲೇಜು ಶುಲ್ಕವನ್ನು ಭರಿಸಲಾಗುವದೆಂದು ಪ್ರಾಂಶುಪಾಲ ಜಾನ್ ತಿಳಿಸಿದ್ದಾರೆ.
ಶಿಕ್ಷಣವನ್ನು ಉತ್ತೇಜಿಸುವ ದಿಸೆಯಲ್ಲಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲಿ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.