ಮಡಿಕೇರಿ, ಮೇ 6: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ರಚನೆಗೊಂಡು 25 ವರ್ಷಗಳಾಗಿರುವ ಸಂಭ್ರಮಕ್ಕಾಗಿ “ಬೊಳ್ಳಿನಮ್ಮೆ” ಕಾರ್ಯಕ್ರಮವನ್ನು ಜೂ. 8 ಮತ್ತು 9 ರಂದು ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ ನಡೆಸಲು ಅಕಾಡೆಮಿಯ ಮೂರನೇ ಪೂರ್ವಭಾವಿ ಸಭೆ ನಿರ್ಧರಿಸಲಾಯಿತು.

ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅಧ್ಯಕ್ಷತೆಯಲ್ಲಿ ಕಾವೇರಿ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಗತ್ಯವಿರುವ ಸಮಿತಿಗಳ ರಚನೆ ಮತ್ತು ಅತಿಥಿ ಗಣ್ಯರ ಆಹ್ವಾನದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳ ಲಾಯಿತು. ಕೊಡವ ಸಾಹಿತ್ಯ ಅಕಾಡೆಮಿಯ ಸ್ಥಾಪನೆಗೆ ಮೂಲ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪಮೊಯ್ಲಿ ಹಾಗೂ ಹಾಲಿ ಮುಖ್ಯಮಂತ್ರಿ ಯಾದಿಯಾಗಿ ರಾಜ್ಯದ ಪ್ರಮುಖ ಖಾತೆಗಳ ಸಚಿವರು ಮತ್ತು ಹಿರಿಯ ಸಾಹಿತಿಗಳನ್ನು ಮುಖ್ಯ ಅತಿಥಿ ಗಳನ್ನಾಗಿ ಆಹ್ವಾನಿಸುವದು, ಕಳೆದ 25 ವರ್ಷಗಳಲ್ಲಿ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಿ ಗೌರವಿಸಲಾಗುವದು. “ಬೊಳ್ಳಿನಮ್ಮೆ” ಕಾರ್ಯಕ್ರಮದ ಸಮಿತಿಗೆ ಭಾಷಿಕ ಸಮಾಜದವರನ್ನು ಸೇರಿಸಿಕೊಳ್ಳಲು ನಿರ್ಧರಿಸಲಾಯಿತು. ಈ ಸಂದರ್ಭ ಮಾತನಾಡಿದ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ, ಕಳೆದ 3 ತಿಂಗಳ ಕಾಲ “ಬೊಳ್ಳಿನಮ್ಮೆ” ಕಾರ್ಯಕ್ರಮದ ಯಶಸ್ಸಿಗಾಗಿ ನಡೆದ ತಯಾರಿಯ ಬಗ್ಗೆ ವಿವರಿಸಿದರು.

ಸಮಿತಿಗಳ ವಿವರ: ಪ್ರಚಾರ ಸಮಿತಿಯ ಸಂಚಾಲಕರಾಗಿ ನಾಳಿಯಮ್ಮಂಡ ಕೆ. ಉಮೇಶ್, ಐತಿಚಂಡ ರಮೇಶ್ ಉತ್ತಪ್ಪ ಹಾಗೂ ಬೀಕಚಂಡ ಬೆಳ್ಯಪ್ಪ. ಮೆರವಣಿಗೆ ಸಮಿತಿಯ ಸಂಚಾಲಕರಾಗಿ ಬೊಳ್ಳಜಿರ ಬಿ. ಅಯ್ಯಪ್ಪ, ವೇದಿಕೆ ಸಮಿತಿಯ ಸಂಚಾಲಕರಾಗಿ ಹಂಚೆಟ್ಟಿರ ಮನು ಮುದ್ದಪ್ಪ, ತೋರೇರ ಎಂ. ಮುದ್ದಯ್ಯ ಮತ್ತು ಮನ್ನಕಮನೆ ಬಾಲಕೃಷ್ಣ. ಸ್ವಾಗತ ಸಮಿತಿಯ ಸಂಚಾಲಕರಾಗಿ ಆಂಗೀರ ಕುಸುಮ್, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಹಾಗೂ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಸಾಂಸ್ಕøತಿಕ ಸಮಿತಿಯ ಸಂಚಾಲಕರಾಗಿ ಅಜ್ಜಮಾಡ ಪಿ. ಕುಶಾಲಪ್ಪ, ಸುಳ್ಳಿಮಾಡ ಭವಾನಿ ಕಾವೇರಿಯಪ್ಪ, ಚಂಗುಲಂಡ ಪಿ. ಸೂರಜ್ ಮತ್ತು ಕುಡಿಯರ ಶಾರದ, ಗೋಷ್ಠಿಗಳ ಸಮಿತಿಯ ಸಂಚಾಲಕರಾಗಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮತ್ತು ಬೊಳ್ಳಜಿರ ಬಿ. ಅಯ್ಯಪ್ಪ, ವಸ್ತು ಪ್ರದರ್ಶನ ಮತ್ತು ಮಾರಾಟ ಸಮಿತಿಯ ಸಂಚಾಲಕರಾಗಿ ಅಜ್ಜಮಾಡ ಪಿ. ಕುಶಾಲಪ್ಪ ಮತ್ತು ಹೆಚ್.ಎ. ಗಣಪತಿ. ವಸತಿ ಮತ್ತು ಸಾರಿಗೆ ಸಮಿತಿ ಸಂಚಾಲಕರಾಗಿ ಮನ್ನಕಮನೆ ಬಾಲಕೃಷ್ಣ, ಉಟೋಪ ಚಾರ ಸಮಿತಿ ಸಂಚಾಲಕರಾಗಿ ಆಪಟ್ಟೀರ ಎಸ್. ಮೊಣ್ಣಪ್ಪ ಮತ್ತು ಮನ್ನಕಮನೆ ಬಾಲಕೃಷ್ಣ ಆಯ್ಕೆ ಯಾಗಿದ್ದಾರೆ. ಅಲ್ಲದೆ ಕೊಡವ ಭಾಷಿಕರನ್ನು ಈ ಸಮಿತಿಗೆ ಸೇರಿಸಿಕೊಳ್ಳಲು ಸಭೆ ನಿರ್ಧರಿಸಿತು.

ಕಾರ್ಯಕ್ರಮಗಳ ವಿವರ: ಜೂ. 8 ರಂದು ಬೆಳಿಗ್ಗೆ 9 ಗಂಟೆಗೆ ಮೆರವಣಿಗೆ, 10.30ಕ್ಕೆ ಸಭಾ ಕಾರ್ಯಕ್ರಮ ಹಾಗೂ ಮಳಿಗೆಗಳ ಉದ್ಘಾಟನೆ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರದರ್ಶನ (ಉಮ್ಮತ್ತಾಟ್, ಕೋಲಾಟ್, ಬೊಳಕಾಟ್, ಕತ್ತಿಯಾಟ್, ಪರೆಯಕಳಿ, ದುಡಿಕೊಟ್ಟ್, ಉರ್‍ಟಿಕೊಟ್ಟ್, ತಾಲಿಪಾಟ್, ಕಾಪಳಕಳಿ) ನಡೆಯಲಿದೆ. ಸಂಜೆ 5 ಗಂಟೆಗೆ ಕೊಡಗಿನ ಕಲಾವಿದರಿಂದ ಕೊಡವ ನಾಟಕ ಪ್ರದರ್ಶನವಿದೆ. ಜೂ. 9 ರಂದು ಬೆಳಿಗ್ಗೆ 9.30ಕ್ಕೆ ವಿಚಾರಗೋಷ್ಠಿ, 10.30ಕ್ಕೆ ಗೋಣಿಕೊಪ್ಪಲುವಿನ ಲಯನ್ಸ್ ಸ್ಕೂಲ್ ವತಿಯಿಂದ ಸಾಮೂಹಿಕ ನೃತ್ಯ ಪ್ರದರ್ಶನ ಗೊಳ್ಳಲಿದೆ. ಬೆಳಿಗ್ಗೆ 11.30ಕ್ಕೆ ಕವಿಗೋಷ್ಠಿ, ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಜೆ 5 ಗಂಟೆಗೆ ಖ್ಯಾತ ಕಲಾವಿದರಿಂದ ಕೊಡವ ಸಾಂಸ್ಕøತಿಕ ಗೀತಗಾಯನ ನಡೆಯಲಿದೆ. ಜೂ. 8 ಮತ್ತು 9 ರಂದು ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ಎರಡು ದಿನಗಳು ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅಕಾಡೆಮಿ ಪ್ರಮುಖರು ವಿವರಿಸಿದರು. ಸಭೆಯಲ್ಲಿ ಅಕಾಡೆಮಿಯ ಮಾಜಿ ಅಧ್ಯಕ್ಷರುಗಳಾದ ಚೆರಿಯಪಂಡ ರಾಜ ನಂಜಪ್ಪ, ಬಚಾರಣಿಯಂಡ ಅಪ್ಪಣ್ಣ, ಐಮುಡಿಯಂಡ ರಾಣಿ ಮಾಚಯ್ಯ, ಅಡ್ಡಂಡ ಕಾರ್ಯಪ್ಪ, ಪ್ರಚಾರ ಸಮಿತಿಯ ಸಂಚಾಲಕ ನಾಳಿಯಮ್ಮಂಡ ಕೆ. ಉಮೇಶ್, ಮೆರವಣಿಗೆ ಸಮಿತಿಯ ಸಂಚಾಲಕÀ ಬೊಳ್ಳಜಿರ ಬಿ. ಅಯ್ಯಪ್ಪ, ವೇದಿಕೆಯ ಸಮಿತಿಯ ಸಂಚಾಲಕ ಹಂಚೆಟ್ಟಿರ ಮನು ಮುದ್ದಪ್ಪ, ತೋರೇರ ಎಂ. ಮುದ್ದಯ್ಯ, ಸ್ವಾಗತ ಸಮಿತಿಯ ಸಂಚಾಲಕÀ ಅಂಗೀರ ಕುಸುಮ್, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಸಾಂಸ್ಕøತಿಕ ಸಮಿತಿಯ ಸಂಚಾಲಕ ಸುಳ್ಳಿಮಾಡ ಭವಾನಿ ಕಾವೇರಿಯಪ್ಪ, ಚಂಗಲಂಡ ಪಿ. ಸೂರಜ್ ಮತ್ತು ಕುಡಿಯರ ಶಾರದ, ಊಟೋಪಚಾರ ಸಮಿತಿ ಸಂಚಾಲಕÀ ಆಪಟ್ಟೀರ ಎಸ್. ಮೊಣ್ಣಪ್ಪ ಹಾಗೂ ಕೊಡವ ಭಾಷಿಕ ವಿವಿಧ ಸಮಾಜಗಳ ಮುಖಂಡರು, ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಬೊಳ್ಳಜಿರ ಬಿ. ಅಯ್ಯಪ್ಪ ಸ್ವಾಗತಿಸಿ, ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ವಂದಿಸಿದರು.

.