ಶ್ರೀಮಂಗಲ, ಮೇ 5: 1994ರಿಂದ ಕೊಡಗಿನ ಎಲ್ಲಾ ಗ್ರಾಮಗಳಲ್ಲೂ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಉಳಿಕೆ ಬೆಳವಣಿಗೆಗೆ ನಾಟಕ, ವಿಚಾರಗೋಷ್ಠಿ, ಸಾಹಿತ್ಯ ಗೋಷ್ಠಿ, ಸಂಗೀತ ಗೋಷ್ಠಿ, ಸಾಹಿತ್ಯ ಶಿಬಿರ, ಕೊಡವ ಸಾಂಸ್ಕೃತಿಕ ಪೈಪೆÇೀಟಿ ಸೇರಿದಂತೆ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಿರಂತರವಾಗಿ ಜನಜಾಗೃತಿಯನ್ನು ಕೊಡವ ತಕ್ಕ್ ಎಳ್ತ್‍ಕಾರಡ ಕೂಟ ಮಾಡುತ್ತಿದೆ. ಕೊಡವ ಭಾಷೆಯನ್ನು ಸಂವಿದಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಹಾಗೂ ಕೊಡವ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಪಡೆಯುವ ಉದ್ದೇಶದ ಈಡೇರಿಕೆಗಾಗಿ ಪ್ರಯತ್ನಿಸುತ್ತಿದ್ದು, ಸಾಧ್ಯವಾದಷ್ಟು ಕೊಡವ ಭಾಷಾ ಪುಸ್ತಕಗಳನ್ನು ಪ್ರಕಟಿಸುವ ಉದ್ದೇಶ ಹೊಂದಿದೆ ಎಂದು ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಮಾಹಿತಿ ನೀಡಿದರು.

ಕೊಡವ ತಕ್ಕ್ ಎಳ್ತ್‍ಕಾರಡ ಕೂಟ, ಮೈಸೂರು ಕೊಡವ ಸಮಾಜ ಹಾಗೂ ಲೋಪಮುದ್ರೆ ಕೊಡವ ಸಂಘ, ಮೈಸೂರು ಈ ಮೂರು ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಮೈಸೂರು ಕೊಡವ ಸಮಾಜದಲ್ಲಿ ಜರುಗಿದ ವಿಶೇಷ ಕೊಡವ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು. ಕೊಡವ ಭಾಷೆಯಲ್ಲಿ ಸಾಹಿತ್ಯ ಕೃಷಿಯನ್ನು ಅಭಿವೃದ್ದಿ ಪಡಿಸುವ ಉದ್ದೇಶದಿಂದ 2000ನೇ ಇಸವಿಯಿಂದ ‘ಜನಪ್ರಿಯ ಕೊಡವ ಸಾಹಿತ್ಯ ಮಾಲೆ’ ಯೋಜನೆಯಲ್ಲಿ ಪ್ರತಿ ತಿಂಗಳಿಗೆ ಒಂದು ಪುಸ್ತಕದಂತೆ ಇದುವರೆಗೆ 157 ಪುಸ್ತಕಗಳನ್ನು ‘ಕೂಟ’ ಹೊರತಂದಿದ್ದು, ಇಂದು 158 ಹಾಗೂ 159ನೇ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಸಾಹಿತ್ಯಾಭಿಮಾನಿಗಳ ಸಹಕಾರದಿಂದ ಮತ್ತಷ್ಟು ಪುಸ್ತಕಗಳನ್ನು ಹೊರತರುವ ಉದ್ದೇಶವಿದೆ ಎಂದರು.

ಲೇಖಕಿ ಪೆಮ್ಮಂಡ ಮೀರಾ ಬಿದ್ದಪ್ಪ ಬರೆದು ದಾನಿಗಳಾದ ಅಜ್ಜಮಾಡ ಶಂಕರು ನಾಚಪ್ಪ ಪ್ರಯೋಜಿಸಿದ ‘ಕೂಟ’ದ 158ನೇ ಹೆಜ್ಜೆಯ ‘ಬೊಳ್ಳಿರ ಕಪ್ಪ್’ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ವೈಸ್ ಚಾನ್ಸಿಲರ್ ಕಂಬೆಯಂಡ ಶರಿ ಬೆಳ್ಯಪ್ಪ, ಸರ್ಕಾರದ ಹಣ ಸುಲಭದಲ್ಲಿ ಸಿಕ್ಕಿದರೂ ಸಂಸ್ಥೆಗಳು ಸಾಹಿತ್ಯಕ್ಕೆ ಹೆಚ್ಚಿನ ಒತ್ತು ಕೊಡದೆ ಇರುವ ಈ ಕಾಲಘಟ್ಟದಲ್ಲಿ ಕೇವಲ ಅಭಿಮಾನಿ ದಾನಿಗಳ ಸಹಕಾರದಿಂದ ದೇಶವಿಡೀ ಕಾರ್ಯಕ್ರಮ ನಡೆಸುತ್ತಾ 159 ಪುಸ್ತಕಗಳನ್ನು ಬಿಡುಗಡೆ ಮಾಡಿರುವ ಏಕೈಕ ಸ್ವಯಂ ಸೇವಾ ಸಂಸ್ಥೆ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಕಾರ್ಯಸಾಧನೆ ಶ್ಲಾಘನೀಯ. ‘ಕೂಟ’ದಿಂದ ಇನ್ನಷ್ಟು ಪುಸ್ತಕಗಳು ಹೊರತರಲು ಸಹಕಾರಿಯಾಗುವಂತೆ ತಾನು 10 ಸಾವಿರ ರೂಪಾಯಿಗಳ ದೇಣಿಗೆ ನೀಡುವದಾಗಿ ಭರವಸೆ ನೀಡಿದರು.

ಲೋಪಮುದ್ರೆ ಕೊಡವ ಸಂಘದ ಅಧ್ಯಕ್ಷ ಮಚ್ಚಮಾಡ ಕೆ. ದೇವಯ್ಯ ಮಾತನಾಡಿ ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ. ಪೆÇೀಷಕರು ಮಕ್ಕಳಿಗೆ ಕೊಡವ ಭಾಷೆ ಸಂಸ್ಕೃತಿಯನ್ನು ಕಲಿಸದಿರುವದೇ ಯುವ ಜನಾಂಗ ಆಂಗ್ಲ ಭಾಷೆ ಹಾಗೂ ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲಲು ಕಾರಣವಾಗಿದೆ. ಪೆÇೀಷಕರು ಮಕ್ಕಳಿಗೆ ಕೇವಲ ಹಣಗಳಿಸುವ ಉದ್ಯೋಗಕ್ಕೆ ಏರುವದನ್ನು ಮಾತ್ರ ಕಲಿಸದೇ ಕೊಡವ ಸಂಸ್ಕೃತಿಗೆ ಒತ್ತು ನೀಡಲು ಕಲಿಸಬೇಕು ಎಂದರು. ಲೇಖಕಿ ಜಮ್ಮಡ ಬಬಿತಾ ಪೂವಣ್ಣ ಬರೆದ ‘ಕೂಟ’ದ 159ನೇ ಹೆಜ್ಜೆಯ ‘ಪೂಕೊಳ’ ಪುಸ್ತಕದ ಪ್ರಾಯೋಜಕರಾದ ವಲ್ಲಂಡ ಪ್ರಶಾಂತ್ ಮುತ್ತಣ್ಣ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿ, ಸಾಹಿತ್ಯ ಕೃಷಿ ಸುಲಭ ಸಾಧ್ಯವೆನ್ನಲ್ಲ. ಎಲ್ಲರಿಗೂ ಸಾಹಿತ್ಯ ಸೃಷ್ಠಿಸಲು ಸಾಧ್ಯವಾಗದಿದ್ದರೂ ಬಿಡುಗಡೆಗೆ ಆರ್ಥಿಕ ಸಹಕಾರವನ್ನಾದರೂ ನೀಡಿ ಕೊಡವ ಸಾಹಿತ್ಯ ಬೆಳವಣಿಗೆಗೆ ಸಹಕರಿಸಬೇಕು ಎಂದರು. 158ನೇ ಹೆಜ್ಜೆಯ ಪುಸ್ತಕದ ಲೇಖಕಿ ಪೆಮ್ಮಂಡ ಮೀರಾ ಬಿದ್ದಪ್ಪ, 159ನೇ ಹೆಜ್ಜೆಯ ಪುಸ್ತಕದ ಲೇಖಕಿ ಜಮ್ಮಡ ಬಬಿತಾ ಪೂವಣ್ಣ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಚೇನಂಡ ರಘು ಉತ್ತಪ್ಪ ಪ್ರಾರ್ಥಿಸಿ, ಮೈಸೂರು ಕೊಡವ ಸಮಾಜದ ಕಾರ್ಯದರ್ಶಿ ಮಲ್ಚೀರ ಪೆÇನ್ನಪ್ಪ ಸ್ವಾಗತಿಸಿ, ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ನಿರ್ದೇಶಕರಾದ ಕಾಳಿಮಾಡ ಮೋಟಯ್ಯ ಹಾಗೂ ಬೊಜ್ಜಂಗಡ ನಿತಿನ್ ನಂಜಪ್ಪ ನಿರೂಪಿಸಿದರು. ಕೂಟದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ವಂದಿಸಿದರು. ‘ಕೂಟ’ದ ಸದಸ್ಯರಾದ ಕೋಟೇರ ಉದಯ ಪೂಣಚ್ಚ ಹಾಗೂ ಮೂರೀರ ಪ್ರಶಾಂತ್ ನೇತೃತ್ವದಲ್ಲಿ ಸಾಂಸ್ಕೃತಿಕ ಪೈಪೆÇೀಟಿ ನಡೆಯಿತು.