ಕಾಕೋಟುಪರಂಬು (ವೀರಾಜಪೇಟೆ), ಮೇ 5: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ನಾಕೌಟ್ ಹಾಗೂ ಚಾಂಪಿಯನ್ಸ್ ಲೀಗ್ ಪಂದ್ಯಾಟದಲ್ಲಿ ಪಳಂಗಂಡ, ಚೇಂದಂಡ, ಮಂಡೇಪಂಡ, ಪರದಂಡ ತಂಡಗಳು ಸೆಮಿಫೈನಲ್ ಹಂತ ತಲುಪಿದೆ. ನಾಕೌಟ್ ಪಂದ್ಯಾಟದಲ್ಲಿ ಪುಚ್ಚಿಮಂಡ ತಂಡ ಮುಂದಿನ ಸುತ್ತಿನ ಅರ್ಹತೆ ಪಡೆದುಕೊಂಡಿದೆ.

ಚಾಂಪಿಯನ್ಸ್ ಲೀಗ್ ಪಂದ್ಯಾಟದ ಕ್ವಾರ್ಟರ್ ಫೈನಲ್ಸ್‍ನಲ್ಲಿ ಪಳಂಗಂಡ ತಂಡ 2-0 ಗೋಲಿನಿಂದ ಕೂತಂಡ ತಂಡವನ್ನು ಪರಾಭವ ಗೊಳಿಸಿತು. ಪಳಂಗಂಡ ಪರ ಶ್ಯಾಂ ಕಾಳಪ್ಪ(10ನಿ), ಪ್ರಸಿಲ್ (21ನಿ)ದಲ್ಲಿ ಗೋಲು ದಾಖಲಿಸಿದರು. ಚೇಂದಂಡ ತಂಡವು 3-0 ಗೋಲುಗಳಿಂದ ಕುಲ್ಲೇಟ್ಟಿರ ತಂಡವನ್ನು ಮಣಿಸಿತು. ಚೇಂದಂಡ ಪರ ಶಮ್ಮಿ(6ನಿ), ಸುಬ್ಬಯ್ಯ(13ನಿ), ತಮ್ಮಯ್ಯ(19ನಿ)ದಲ್ಲಿ ಗೋಲು ಬಾರಿಸಿದರು. ಚೇದಂಡ ಪರ ಒಲಂಪಿಯನ್ ನಿಕಿನ್ ತಿಮ್ಮಯ್ಯ ಉತ್ತಮ ಪ್ರದರ್ಶನ ನೀಡಿದರು. ಮಂಡೇಪಂಡ ತಂಡ 4-3 ಗೋಲುಗಳಿಂದ ಮುಕ್ಕಾಟ್ಟಿರ(ಬೋಂದಾ) ತಂಡವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ ಪರಾಭವ ಗೊಳಿಸಿತ್ತು. ನಿಗದಿತ ಅವದಿಯಲ್ಲಿ ಯಾವದೇ ಗೋಲಾಗದ ಕಾರಣ ಪೆನಾಲ್ಟಿ ಶೂಟೌಟ್ ನಿಯಮ ಅಳವಡಿಸಲಾಯಿತು.

ಮಂಡೇಪಂಡ ಪರ ದಿಲನ್, ಕವನ್, ಸಜನ್, ಮುಕೇಶ್, ಮುಕ್ಕಾಟಿರ ಪರ ಪೂಣಚ್ಚ, ಚಿರನ್, ಚಿಣ್ಣಪ್ಪ ಗೋಲು ಗಳಿಸಿ ಪಂದ್ಯಾಟದಿಂದ ನಿರ್ಗಮಿಸಿದರು. ಪರದಂಡ ತಂಡ ಚೆಪ್ಪುಡಿರ ತಂಡವನ್ನು 2-0 ಗೋಲುಗಳಿಂದ ಮಣಿಸಿತು. ಪರದಂಡ ಪರ ಕೀರ್ತಿ(27ನಿ), ಮುತ್ತಣ್ಣ(47ನಿ)ದಲ್ಲಿ ಗೋಲು ಬಾರಿಸಿದರು.

ನಾಕೌಟ್ ಪಂದ್ಯಾಟದಲ್ಲಿ ಪುಚ್ಚಿಮಂಡ ತಂಡ ಕೊಕ್ಕಂಡ ತಂಡವನ್ನು 2-1 ಗೋಲುಗಳಿಂದ ಟ್ರೈ ಬ್ರೇಕರ್‍ನಲ್ಲಿ ಪರಾಭವ ಗೋಳಿಸಿತು. ನಿಗದಿತ ಅವದಿಯಲ್ಲಿ ಯಾವದೇ ಗೋಲಾಗದ ಕಾರಣ ಟ್ರೈ ಬ್ರೇಕರ್ ನಿಯಮ ಅಳವಡಿಸಲಾಯಿತು. ಟ್ರೈ ಬ್ರೇಕರ್‍ನಲ್ಲಿ ಪುಚ್ಚಿಮಂಡ ಪರ ಯಶ್ವೀನ್, ವಿರಾಟ್, ಕೊಕ್ಕಂಡ ಪರ ದೀರಜ್ ಗೋಲು ದಾಖಲಿಸಿದರು.