ಮಡಿಕೇರಿ, ಮೇ 5: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಧ್ಯಕ್ಷತೆ ಯಲ್ಲಿ ಕೊಡಗು ಜಿಲ್ಲೆ ಯಲ್ಲಿನ ಪುನರ್ ವಸತಿ ಸಂಬಂಧ ವಿವಿಧ ಇಲಾಖೆ ಅಧಿಕಾರಿಗ ಳೊಂದಿಗೆ ಸಭೆ ನಡೆಯಿತು.
ಮನೆ ನಿರ್ಮಾಣದ ಪ್ರಗತಿ, ಪರಿಹಾರ ವಿತರಣೆ ಮತ್ತಿತರ ಸಂಬಂಧ ಜಿಲ್ಲಾಧಿಕಾರಿ ಅವರು ಮಾಹಿತಿ ಪಡೆದರು. ಈಗಾಗಲೇ ಪೂರ್ಣಗೊಳ್ಳುವ ಹಂತದಲ್ಲಿರುವ ಮನೆಗಳನ್ನು ತ್ವರಿತವಾಗಿ ಹಸ್ತಾಂತರ ಮಾಡಬೇಕಿದ್ದು, ಆ ದಿಸೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅನೀಸ್ ಕಣ್ಮಣಿ ಜಾಯ್ ಸೂಚಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ಅವರು ಜಿಲ್ಲಾ ವಿಪತ್ತು ನಿರ್ವಹಣೆ, ನಿಯಂತ್ರಣ ಕೊಠಡಿಗೆ ಬರುವ ದೂರವಾಣಿ ಕರೆಗಳಿಗೆ ಸ್ಪಂದನ ಮತ್ತಿತರ ಬಗ್ಗೆ ಸಲಹೆ ನೀಡಿದರು. ಉಪ ವಿಭಾಗಾಧಿ ಕಾರಿ ಟಿ. ಜವರೇ ಗೌಡ, ನಗರ ಸಭೆ ಪೌರಾಯುಕ್ತ ರಮೇಶ್, ತೋಟ ಗಾರಿಕೆ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್, ಲೋಕೋಪಯೋಗಿ ಇಲಾಖೆಯ ಎಇಇ ನಟೇಶ್, ಜಿ.ಪಂ. ಇಂಜಿನಿ ಯರ್ ಶ್ರೀಕಂಠಯ್ಯ, ತಹಶೀಲ್ದಾರ್ ನಟೇಶ್, ಗೋವಿಂದರಾಜು ಇತರರಿದ್ದರು.