ಸಿದ್ದಾಪುರ, ಮೇ 3: ಮಾಲ್ದಾರೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಮಲೇರಿಯಾ ದಿನ ಅಚರಿಸಲಾಯಿತು. ಮಲೇರಿಯಾ ರೋಗದಿಂದ ಮುಕ್ತಗೊಳಿಸುವ ಉದ್ದೇಶದಿಂದ ಶೂನ್ಯ ಮಲೇರಿಯಾ ನನ್ನಿಂದ ಘೋಷಣೆಯೊಂದಿಗೆ ಜಾಥಾ ಆರಂಭಗೊಂಡು ನಾಗರಿಕರಲ್ಲಿ ಅರಿವು ಮೂಡಿಸಲಾಯಿತು.

ಈ ಸಂದರ್ಭ ಆರೋಗ್ಯ ಇಲಾಖೆಯ ಸುದರ್ಶನ್ ಮಾಹಿತಿ ನೀಡಿದರು. ಇಲಾಖಾ ಸಿಬ್ಬಂದಿ ದಾದಿಯರು ಮತ್ತು ಆಶಾ ಕಾರ್ಯಕರ್ತರು ಹಾಜರಿದ್ದರು.