ನಾಪೋಕ್ಲು, ಮೇ 3: ಇಲ್ಲಿಗೆ ಸಮೀಪದ ಹಳೆತಾಲೂಕಿನ ಅಂಗನವಾಡಿ ಕೇಂದ್ರದಲ್ಲಿ ಭಗವತಿ ಸ್ತ್ರೀಶಕ್ತಿ ಗುಂಪು ಹಾಗೂ ಹಳೆ ತಾಲೂಕು ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಸಭೆ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ಚಿತ್ರಾ ನಾಣಯ್ಯ ನಿವೃತ್ತ ಶಿಕ್ಷಕಿ ಶಿವಚಾಳಿಯಂಡ ಪಾರ್ವತಿ, ಪಂಚಾಯಿತಿ ಸದಸ್ಯೆ ಮುತ್ತುರಾಣಿ ಅಚ್ಚಪ್ಪ ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಮಣವಟ್ಟೀರ ಅಕ್ಕಮ್ಮ ಪ್ರಾರ್ಥಿಸಿ, ಅಂಗನವಾಡಿ ಶಿಕ್ಷಕಿ ಕಾಂತಿ ಸ್ವಾಗತಿಸಿ, ವಂದಿಸಿದರು.