ಮಡಿಕೇರಿ, ಮೇ 3: ಬರಹಾಗಾರ್ತಿ ಉಳುವಂಡ ಕಾವೇರಿಉದಯ ಬರೆದಿರುವ ಪುಣ್ಯಕ್ಷೇತ್ರ ಪರಿಚಯ ಎಂಬ ಕೃತಿಯನ್ನು ಕೊಡವ ಮಕ್ಕಡಕೂಟದ ವತಿಯಿಂದ ನಾಪೋಕ್ಲುವಿನ ಶ್ರೀ ಭಗವತಿದೇವಾಲಯದ ಸಮುದಾಯ ಭವನದಲ್ಲಿ ಮೇ5ರಂದು ನಡೆಯುವ 7ನೇ ವರ್ಷದ ಆಟ್‍ಪಾಟ್ ಪಡಿಪುಕಾರ್ಯಕ್ರಮದಲ್ಲಿ ಉದ್ಘಾಟಿಸಲಾಗುವದೆಂದು ಕೊಡವ ವiಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ತಿಳಿಸಿದ್ದಾರೆ.

ತಾ. 5ರ ಮಧ್ಯಾಹ್ನ 3ಗಂಟೆಗೆ ನಾಪೋಕ್ಲುವಿನ ಶ್ರೀ ಭಗವತಿ ದೇವಾಲಯದ ಸಮುದಾಯ ಭವನದಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಆಟ್ ಪಾಟ್ ಪಡಿಪು ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಾಪೋಕ್ಲು ಗ್ರಾಮದ ಶ್ರೀ ಭಗವತಿ ದೇವಾಲಯದ ಅಧ್ಯಕ್ಷ ಅರೆಯಡ ಸೋಮಪ್ಪ, ಮಾಜಿ ಸೈನಿಕ ಕೊಂಡಿರ ಗಣೇಶ್ ನಾಣಯ್ಯ, ಕೂಟದ ಸಲಹೆಗಾರ ಕುಲ್ಲೇಟಿರ ಅಜಿತ್‍ನಾಣಯ್ಯ, ಉಳುವಂಗಡ ಕಾವೇರಿ ಉದಯ್ ಭಾಗವಹಿಸಲಿರುವರು.

ಈ ಕಾರ್ಯಕ್ರಮದ ಸಂಚಾಲಕರಾಗಿ ಕೂಟದ ಉಪಾಧ್ಯಕ್ಷ ಬಾಳೆಯಡ ಪ್ರತೀಶ್‍ಪೂವಯ್ಯ, ಜಂಟಿ ಕಾರ್ಯದರ್ಶಿ ಕೇಲೇಟಿರ ದೇವಯ್ಯ ಹಾಗೂ ನಿರ್ದೇಶಕಿ ಬಾಳೆಯಡ ದಿವ್ಯಮಂದಪ್ಪ ಕಾರ್ಯ ನಿರ್ವಹಿಸಲಿರುವರು. ಉಳುವಂಗಡ ಕಾವೇರಿಉದಯ್ ಬರೆದ ತಂದೆ ದಿ.ಚಂಗುಲಂಡ ಸಿ ಮಾದಪ್ಪ ನೆನಪಿಗಾಗಿ ಅರ್ಪಿಸಿರುವ ಕೊಡವ ಮಕ್ಕಡಕೂಟದ ಕೊಡವ ಸಾಹಿತ್ಯ ಮಾಲೆಯ 26ನೇ ಪುಸ್ತಕ ‘ಪುಣ್ಯಕೇತ್ರಪರಿಚಯ’ ಪುಸ್ತಕವನ್ನು ಬಿಡುಗಡೆಗೊಳಿಸಲಾಗುತ್ತಿದೆ.