ಮಡಿಕೇರಿ, ಮೇ 4 : ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀಕೋಟೆ ಮಾರಿಯಮ್ಮ ದೇವಿಯ ಪ್ರತಿಷ್ಠಾಪನಾ ವಾರ್ಷಿ ಕೋತ್ಸವ, ನಾಗ ಪ್ರತಿ ಷ್ಠಾಪನಾ ಮಹೋತ್ಸವ, ನಾಗದರ್ಶನ, ಪಾಷಾಣಮೂರ್ತಿ ದೈವದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ದೈವ ಕೋಲ ತಾ. 6 ಮತ್ತು 7 ರಂದು ನಡೆಯಲಿದೆ.
ತಾ. 6 ರಂದು ಸಂಜೆ ಪಯ್ಯನ್ನೂರು ಆಚಾರ್ಯ ಈಶ್ವರನ್ ನಂಬೂದರಿ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನ ಗಳೊಂದಿಗೆ ಉತ್ಸವ ಆರಂಭಗೊಳ್ಳಲಿದೆ
ಅಂದು ಸಂಜೆ 6 ಗಂಟೆಗೆ ಆಚಾರ್ಯ ವರಣಂ, ಪುಣ್ಯಹ ಶುದ್ಧಿ, ಸುದರ್ಶನ ಹೋಮ, ದೇವಿ ಪೂಜೆ, ಲಲಿತಾ ಸಹಸ್ರನಾಮಾರ್ಚನೆ ಹಾಗೂ ಪ್ರಸಾದ ವಿತರಣೆಯಾಗಲಿದೆ.
ತಾ. 7 ರಂದು ನಾಗ ಪ್ರತಿ ಷ್ಠಾಪನಾ ವಾರ್ಷಿಕೋತ್ಸವ ಹಾಗೂ ನಾಗದರ್ಶನ ನಡೆಯಲಿದ್ದು, ಬೆಳಗ್ಗೆ 6 ಗಂಟೆಯಿಂದ ಮಹಾ ಗಣಪತಿ ಹೋಮ, ನವಕ ಪಂಚಗವ್ಯ ಕಳಶ ಪೂಜೆ, ನವಕ ಪಂಗವ್ಯ ಕಳಶಾಭಿಷೇಕ, ಸರ್ವಾಲಂಕಾರ ಮಹಾ ಪೂಜೆ, ಪಾಷಾಣ ಮೂರ್ತಿ ದೈವದ ಕಳಶ ಪೂಜೆ, ಅಲಂಕಾರ ಪೂಜೆ ಹಾಗೂ ಮಂಗಳಾರತಿ ನಡೆಯಲಿದೆ.
ಬೆಳಗ್ಗೆ 8 ಗಂಟೆಗೆ ಆಶ್ಲೇಷ ಬಲಿ, ನಾಗಪೂಜೆ, ಕ್ಷೀರಾಭಿಷೇಕ, ನಾಗದರ್ಶನ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸ ಲಾಗಿದೆ. ಸಂಜೆ 7.30 ರಿಂದ ಪಾಷಾಣ ಮೂರ್ತಿ ದೈವ ಕೋಲ ಜರುಗಲಿದೆ.
ಶ್ರೀಪಾಷಾಣಮೂರ್ತಿ ದೈವದ ಅಗೆಲು ಸೇವೆ, ಪಟ್ಟೆಸೀರೆ, ಚಿನ್ನ, ಬೆಳ್ಳಿ ಅರ್ಪಣೆ, ಮಲ್ಲಿಗೆ ಹೂವನ್ನು ಹರಕೆ ರೂಪದಲ್ಲಿ ಭಕ್ತಾಧಿಗಳು ನೀಡಬಹುದಾಗಿದೆ. ತಾ. 8 ರಂದು ಸಂಜೆ 5 ಗಂಟೆಯಿಂದ ಪಾಷಾಣ ಮೂರ್ತಿಗೆ ಅಗೆಲು ಸೇವೆ ನಡೆಯಲಿದೆ. ದೇಣಿಗೆ ನೀಡಲು ಇಚ್ಛಿಸು ವವರು ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಟ್ರಸ್ಟ್, ಖಾತೆ ನಂ. 0753454651 ಇಂಡಿಯನ್ ಬ್ಯಾಂಕ್, ಕಾಲೇಜು ರಸ್ತೆ, ಮಡಿಕೇರಿ ಜಮಾ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ 9449140988, 9902612829, ಸಂಪರ್ಕಿಸಬಹುದು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.