ವೀರಾಜಪೇಟೆ, ಮೇ 3: ನಗರದ ಕಾರು ನಿಲ್ದಾಣದಲ್ಲಿರುವ ಕಾವೇರಿ ಲಘು ವಾಹನ ಚಾಲಕ ಮತ್ತು ಮಾಲೀಕರ ಸಂಘದ ಮಹಾಸಭೆ ಮತ್ತು ಚುನಾವಣೆ ನಡೆಯಿತು,

ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆ.ಎನ್. ರಾಜ ಮರು ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಹೇಮಂತ್, ಪ್ರಧಾನ ಕಾರ್ಯದÀರ್ಶಿಯಾಗಿ ಜೈಸನ್ ಪೌಲೋಸ್, ಗೌ. ಅಧ್ಯಕ್ಷರಾಗಿ ಎಂ.ಯು. ನಜೀರ್, ಕಾರ್ಯಾಧÀ್ಯಕ್ಷ ರಾಗಿ ಎಂ.ಕೆ. ಹ್ಯಾರಿಸ್, ಸಹ ಕಾರ್ಯದರ್ಶಿಯಾಗಿ ಬಿ.ಎಸ್ ಚೇತನ್, ಖಜಾಂಚಿಯಾಗಿ ಸುದೀಶ್ ಆರ್. ಆಯ್ಕೆಗೊಂಡು 8 ಮಂದಿ ನಿರ್ದೇಶಕರಾಗಿ ಆಯ್ಕೆಗೊಂಡಿ ದ್ದಾರೆ. ಚುನಾವಣಾ ವೀಕ್ಷಕರಾಗಿ ಸಂಘದ ಕಾನೂನು ಸಲಹೆಗಾರ ಟಿ.ಪಿ. ಕೃಷ್ಣ ಕಾರ್ಯ ನಿರ್ವಹಿಸಿದರು. ಸಂಘದ ಸದಸ್ಯರು ಹಾಜರಿದ್ದರು.