ಕೂಡಿಗೆ, ಮೇ 2: ಕೂಡಿಗೆಯಲ್ಲಿ ಹರಿಯುವ ಹಾರಂಗಿ ನದಿಗೆ ಅಡ್ಡಲಾಗಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಕಬ್ಬಿಣದ ಸೇತುವೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಬಣ್ಣ ಬಳಿಯುವಿಕೆ ಹಾಗೂ ಸೇತುವೆ ದುರಸ್ತಿ ಕಾಮಗಾರಿಯನ್ನು ನಡೆಸಲಾಗುತ್ತಿದೆ.
ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಪೀಟರ್ ಅವರ ಮುತುವರ್ಜಿಯಲ್ಲಿ ಕಾಮಗಾರಿ ನಡೆಯುತ್ತಲಿದೆ. ಸಾರ್ವಜನಿಕರ ಸುರಕ್ಷತಾ ಹಿತದೃಷ್ಟಿಯಿಂದ ಕಬ್ಬಿಣದ ಗ್ಯಾಲರಿ ಹಾಗೂ ಸೇತುವೆಯ ಎರಡೂ ಬದಿ ಸರಳುಗಳ ಅಳವಡಿಕೆಯು ಭರದಿಂದ ಸಾಗುತ್ತಿದೆ.