ನಾಪೋಕ್ಲು, ಮೇ 2: ಕೊಡಗು ಜಿಲ್ಲಾ ಗೊಲ್ಲ ಯುವ ವೇದಿಕೆ ವತಿಯಿಂದ ತಾ. 4 ಮತ್ತು 5 ರಂದು ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಗೊಲ್ಲ ಜನಾಂಗ ಬಾಂಧವರಿಗೆ ಏರ್ಪಡಿಸಲಾಗಿರುವ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪಂದ್ಯಾಟ ಮಹಿಳೆಯರಿಗೆ ಪಾಸಿಂಗ್‍ದ ಬಾಲ್ ಹಾಗೂ ಶಾಲಾ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ತಾ. 4ರಂದು ಬೆಳಿಗ್ಗೆ 9 ಗಂಟೆಗೆ ಕ್ರೀಡಾಕೂಟವನ್ನು ಕೊಡಗು ಜಿಲ್ಲಾ ಗೊಲ್ಲ ಸಮಾಜದ ಕ್ರೀಡಾ ಸಮಿತಿ ಅಧ್ಯಕ್ಷ ಕಡವಡಿರ ಸಂತೋಷ್ ಉದ್ಘಾಟಿಸುವರು. ಕ್ರೀಡಾ ಸಮಿತಿ ಉಪಾಧ್ಯಕ್ಷ ಅರೆಯಂಡ ಕುಶಾಲಪ್ಪ ಹಾಗೂ ಕಾರ್ಯದರ್ಶಿ ತೊತ್ತಿಯಂಡ ಕಿರಣ್ ಉಪಸ್ಥಿತರಿರುವರು. ಫೈನಲ್ ಕ್ರಿಕೆಟ್ ಪಂದ್ಯದ ಉದ್ಘಾಟನೆಯನ್ನು ಮಡಿಕೇರಿ ನಗರ ಠಾಣೆಯ ಸಹಾಯಕ ಉಪನಿರೀಕ್ಷಕ ಅರೆಯಂಡ ಕುಶಾಲಪ್ಪ ಉದ್ಘಾಟಿಸುವರು. ಕೊಡಗು ಜಿಲ್ಲಾ ಗೊಲ್ಲ ಸಮಾಜದ ಅಧ್ಯಕ್ಷ ಆಚೀರ ನಾಣಯ್ಯ ಹಾಗೂ ಉಪಾಧ್ಯಕ್ಷ ಪೊನ್ನುಕಂಡ ಚಿತ್ರಾ ಮೊಣ್ಣಪ್ಪ ಉಪಸ್ಥಿತರಿರುವರು.