ಕಾಕೋಟುಪರಂಬು (ವೀರಾಜಪೇಟೆ), ಮೇ 2: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ನಾಕೌಟ್ ಹಾಗೂ ಚಾಂಪಿಯನ್ಸ್ ಲೀಗ್ ಪಂದ್ಯಾಟದಲ್ಲಿ ಕಾಂಡಂಡ, ಕಾಳೇಂಗಡ, ಕಡೇಮಾಡ, ಐನಂಡ, ಇಟ್ಟಿರ, ಪುದಿಯೊಕ್ಕಡ, ಅರೆಯಡ ತಂಡಗಳು ಮನ್ನಡೆ ಸಾಧಿಸಿದೆ.
ಮ್ಯೆದಾನ 1 ರಲ್ಲಿ ನಡೆದ ಪಂದ್ಯಾಟದಲ್ಲಿ ಕಾಂಡಂಡ ತಂಡ 1-0 ಗೋಲಿನಿಂದ ಕಣ್ಣಂಡ ತಂಡವನ್ನು ಪರಾಭವ ಗೊಳಿಸಿತು. ಕಾಂಡಂಡ ಪರ ಅಪ್ಪಣ್ಣ (94ನಿ)ದಲ್ಲಿ ಗೋಲು ಬಾರಿಸಿದರು.
ಕಾಳೇಂಗಡ ತಂಡ 4-0 ಗೋಲುಗಳಿಂದ ಸಣ್ಣುವಂಡ ತಂಡವನ್ನು ಮಣಿಸಿತು. ಕಾಳೇಂಗಡ ಪರ ಯಶಶ್ವಿನಿ (15ನಿ), ಮೋನಿಷಾ (19ನಿ), ಬೋಪಣ್ಣ (17.37ನಿ)ದಲ್ಲಿ ಗೋಲು ದಾಖಲಿಸಿದರು.
ಕಡೇಮಾಡ ತಂಡ ಕೋದಂಡ ತಂಡವನ್ನು ಟ್ಯೆ ಬ್ರೇಕರ್ನಲ್ಲಿ 4-3 ಗೋಲುಗಳಿಂದ ಮಣಿಸಿತು. ನಿಗದಿತ ಅವಧಿಯಲ್ಲಿ ಇತ್ತಂಡಗಳು 1-1 ಗೋಲಿನ ಸಮಬಲ ಸಾಧಿಸಿತು. ಕಡೇಮಾಡ ಪರ ಕುಶಾಲಪ್ಪ (24ನಿ), ಟೈ ಬ್ರೇಕರ್ನಲ್ಲಿ ಚರ್ಮಣ್ಣ, ಪೂವಣ್ಣ, ಕಾವೇರಪ್ಪ, ಕೋದಂಡ ಪರ ಅಪ್ಪಣ್ಣ (25ನಿ), ಟೈ ಬ್ರೇಕರ್ನಲ್ಲಿ ಅಪ್ಪಣ್ಣ, ನಿಕಿ ಗೋಲು ದಾಖಲಿಸಿದರು.
ಐನಂಡ ತಂಡವು ಚೆಕ್ಕೆರ ತಂಡವನ್ನು 5-4 ಗೋಲುಗಳಿಂದ ಸಡನ್ಡೆತ್ ನಲ್ಲಿ ಮಣಿಸಿತು. ನಿಗದಿತ ಅವದಿಯಲ್ಲಿ 2-2 ಗೋಲುಗಳ ಸಮಬಲ ಸಾಧಿಸಿತು, ಟೈಬ್ರೇಕರ್ನಲ್ಲೂ 2-2 ಸಮಬಲ ಸಾಧಿಸಿತು. ಸಡನ್ ಡೆತ್ನಲ್ಲಿ ಐನಂಡ ತಂಡ ಜಯ ಗಳಿಸಿದರು. ಐನಂಡ ಪರ ನಾಚಪ್ಪ (6ನಿ), ಬೋಪಣ್ಣ (22ನಿ) ಟೈ ಬ್ರೇಕರ್ನಲ್ಲಿ ಆರ್ಯ, ರಾಜನ್, ಸಡನ್ ಡೆತ್ನಲ್ಲಿ ನಾಚಪ್ಪ ಗೋಲಾಗಿ ಪರಿವರ್ತಿಸಿದರು. ಚೆಕ್ಕೆರ ಪರ ಆದರ್ಶ್ (14ನಿ), ಕಾರ್ಯಪ್ಪ (28ನಿ), ಟೈ ಬ್ರೇಕರ್ನಲ್ಲಿ ಆದರ್ಶ್, ಕಾರ್ಯಪ್ಪ ಗೋಲು ದಾಖಲಿಸಿದರು.
ಇಟ್ಟೀರ ತಂಡ ಮೇಕೇರಿರ ತಂಡವನ್ನು 4-2 ಗೋಲುಗಳಿಂದ ಟೈ ಬ್ರೇಕರ್ನಲ್ಲಿ ಪರಾಭವಗೊಳಿಸಿತು. ನಿಗದಿತ ಅವದಿಯಲ್ಲಿ ಯಾವದೆ ಗೋಲಾಗಲಿಲ್ಲ. ಇಟ್ಟೀರ ಪರ ಅಚ್ಚಪ್ಪ, ರೋಷನ್, ವಿಷ್ಣು, ಜಗತ್, ಮೇಕೇರಿರ ಪರ ನಿತಿನ್ ಕಾರ್ಯಪ್ಪ ಗೋಲು ದಾಖಲಿಸಿದರು.
ತೀತಮಾಡ ತಂಡವು 3-1 ಗೋಲುಗಳಿಂದ ಕಾಂಡೇರ ತಂಡವನ್ನು ಟೈ ಬ್ರೇಕರ್ನಲ್ಲಿ ಪರಾಭವಗೊಳಿಸಿತು. ನಿಗದಿತ ಅವದಿಯಲ್ಲಿ ಯಾವದೇ ತಂಡಗಳೂ ಗೋಲು ಗಳಿಸಲಿಲ್ಲ. ಟೈ ಬ್ರೇಕರ್ನಲ್ಲಿ ತೀತಮಾಡ ಪರ ಭರತ್, ಕಿಶನ್, ಸೋಮಯ್ಯ, ಕಾಂಡೇರ ಪರ ರೋಹನ್ ಬಾರಿಸಿದ ಏಕೈಕ ಗೋಲಿಗೆ ತೃಪ್ತಿ ಪಡಬೇಕಾಯಿತು.
ಮ್ಯೆದಾನ 2ರಲ್ಲಿ ನಡೆದ ಪಂದ್ಯದಲ್ಲಿ ಪುದಿಯೊಕ್ಕಡ ತಂಡ ಮಂಡಿರ ತಂಡವನ್ನು 7-0 ಗೋಲುಗಳಿಂದ ಪರಾಭವಗೊಳಿಸಿತು. ಪುದಿಯೊಕ್ಕಡ ಪರ ಅಂತರಾಷ್ಟ್ರೀಯ ಆಟಗಾರ ಪ್ರಧಾನ್ ಸೋಮಣ್ಣ (4.22ನಿ), ವಿಪನ್ (7.30ನಿ), ಸುಮನ್ (14ನಿ), ರತನ್ (19ನಿ), ಅಭಿನ್ (27ನಿ)ದಲ್ಲಿ ಗೋಲು ಬಾರಿಸಿದರು.
ಅರೆಯಡ ತಂಡ ಚೋಯಮಾಡಂಡ ತಂಡವನ್ನು 1-0 ಗೋಲಿನಿಂದ ಪರಾಭವ ಗೊಳಿಸಿತು. ಅರೆಯಡ ಪರ (28ನಿ)ದಲ್ಲಿ ಚಿಣ್ಣಪ್ಪ ಗೋಲು ಬಾರಿಸಿದರು.