ಸಿದ್ದಾಪುರ, ಮೇ 2 : ಲಂಕಾ ದಾಳಿಯನ್ನು ಖಂಡಿಸಿ ಹುತಾತ್ಮರಾದವರಿಗೆ ಸಂತಾಪ ಸೂಚಿಸುವ ಸಲುವಾಗಿ ನೆಲ್ಯಹುದಿಕೇರಿಯ ಪ್ರಮುಖ ಬೀದಿಗಳಲ್ಲಿ ರಾತ್ರಿ ಕ್ಯಾಂಡಲ್ ಮೆರವಣಿಗೆ ನಡೆಯಿತು.

ನೆಲ್ಯಹುದಿಕೇರಿ ಬಸ್ ನಿಲ್ದಾಣದಲ್ಲಿ ನಡೆದ ಸಂತಾಪ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ ಶಶಿಧರ್ ಮಾತನಾಡಿ ಮಾನವೀಯತೆಕ್ಕಿಂತ ದೊಡ್ಡ ಮೌಲ್ಯಯುತವಾದ ವಸ್ತು ಪ್ರಸ್ತುತ ಜಗತ್ತಿನಲ್ಲಿ ಯಾವದು ಇಲ್ಲ ಮನಸ್ಸು ಜಾತಿಯನ್ನು ಪ್ರೀತಿಸಲಿಕ್ಕೆ ಸಾಧ್ಯವಿಲ್ಲ ಅಂತ ಹೇಳಿದರೆ ಜಗತ್ತಿನಲ್ಲಿ ಪ್ರಕ್ಷುಬ್ಧತೆ ಉದ್ವಿಗ್ನತೆ ನಿರಂತರವಾಗಿ ಇದ್ದೇ ಇರುತ್ತದೆ. ಯಾವದೇ ದೇಶದ್ರೋಹ ಸಂಘಟನೆಗಳಿದ್ದರೂ ಅದನ್ನು ಹತ್ತಿಕ್ಕಿ ಜನರಿಗೆ ರಕ್ಷಣೆ ನೀಡಬೇಕಾಗಿದೆ ಎಂದರು.

ಈ ಸಂದರ್ಭ ಕಾರ್ಮಿಕ ಮುಖಂಡ ಪಿ. ಆರ್. ಭರತ್ , ವಿ. ಎಸ್. ಸಜಿ, ಕೆಪಿಸಿಸಿ ಸದಸ್ಯ ಜೋಸೆಫ್ ಶ್ಯಾಮ್ , ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ತಾಲೂಕು ಪಂಚಾಯಿತಿ ಸದಸ್ಯೆ ಸುಹಾದ ಅಶ್ರಫ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸಫಿಯಾ ಮೊಹಮ್ಮದ್, ಸದಸ್ಯರಾದ ಸಾಬು ವರ್ಗಿಸ್ ,ಹಕೀಂ,ಹನೀಫಾ, ಶುಕೂರ್, ಅಫ್ಸಲ್ ಪ್ರಮುಖರಾದ ಎಂ. ಅಬ್ದುಲ್ಲಾ , ಅಬ್ದುಲ್ ಗಫೂರ್, ಟಿ.ಪಿ ದೇವಸಿ ಸೇರಿದಂತೆ ಒಡಿಪಿ ಮಹಿಳಾ ಸಂಘಟನೆಯ ಪ್ರಮುಖರು ಭಾಗವಹಿಸಿದ್ದರು