ಮಡಿಕೇರಿ, ಏ. 28: ವೀರಾಜಪೇಟೆಯ ಶ್ರೀ ಕಾವೇರಿ ಆಶ್ರಮದ ಸಂಸ್ಥಾಪಕ ಶ್ರೀ ಸದ್ಗುರು ಅಪ್ಪಯ್ಯ ಸ್ವಾಮಿಯವರ 134ನೇ ಜನ್ಮದಿನೋತ್ಸವವನ್ನು ಮೇ 2 ರಂದು ವೀರಾಜಪೇಟೆ ಶ್ರೀ ಕಾವೇರಿ ಆಶ್ರಮದಲ್ಲಿ ಆಚರಿಸಲಾಗುವದು.
ಅಂದು ಬೆಳಿಗ್ಗೆ 7 ಗಂಟೆಗೆ ಶ್ರೀ ಗುರು ಷೋಡಶೋಪಚಾರ ಪೂಜೆ, 8.30 ರಿಂದ 10 ರವರೆಗೆ ಶ್ರೀ ಗುರು ಅಷ್ಟೋತ್ತರ ಶತನಾಮ ಮತ್ತು ಸಹಸ್ತ್ರನಾಮ ಪೂಜೆ. 10.30 ಕ್ಕೆ ಸಭಾ ಕಾರ್ಯಕ್ರಮ ಶ್ರೀ ವಿವೇಕಾನಂದ ಶರಣ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬೆಂಗಳೂರು ಓಂಕಾರ ಆಶ್ರಮದ ಪೀಠಾಧಿಪತಿ ಶ್ರೀ ಮಧುಸೂದನಾನಂದಪುರಿ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಅಪರಾಹ್ನ 11 ಗಂಟೆಗೆ ಶಂನಾಡಿಗ ಕುಂಬೈ ಅವರಿಂದ ಹರಿಕತೆ ನಡೆಯಲಿದೆ. ಅಪರಾಹ್ನ 1 ಗಂಟೆಗೆ ಮಹಾಮಂಗಳಾರತಿ ನಂತರ 1.30 ಕ್ಕೆ ಪ್ರಸಾದ ವಿನಿಯೋಗ ಹಾಗೂ ಊಟೋಪಚಾರ ನೆರವೇರಲಿದೆ ಎಂದು ಆಶ್ರಮದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.