ಕಾಕೋಟುಪರಂಬು (ವೀರಾಜಪೇಟೆ), ಏ. 28: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ನಾಕೌಟ್ ಹಾಕಿ ಪಂದ್ಯಾವಳಿಯಲ್ಲಿ ಸೋಮೆಯಂಡ, ಚೋಳಂಡ, ಮೇಕೇರಿರ, ದಾಸಂಡ, ಕುಪ್ಪಂಡ(ಕೈಕೇರಿ), ಐನಂಡ, ತಂಡಗಳು ಮುಂದಿನ ಸುತ್ತಿನ ಅರ್ಹತೆ ಪಡೆದುಕೊಂಡಿದೆ. ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿ ಪಳಂಗಂಡ ಪರದಂಡ ತಂಡ ಜಯ ಗಳಿಸಿದೆ.

ಸೋಮೆಯಂಡ ತಂಡ ಕುಪ್ಪಂಡ(ನಾಂಗಾಲ) ತಂಡವನ್ನು 3-0 ಗೋಲುಗಳಿಂದ ಸೋಲಿಸಿತು. ಸೋಮೆಯಂಡ ಪರ ಪ್ರಯಾಗ್(3,37ನಿ), ಅಪ್ಪಚ್ಚು(10ನಿ)ದಲ್ಲಿ ಗೋಲು ಬಾರಿಸಿದರು. ಚೋಳಂಡ 2-1 ಗೋಲುಗಳಿಂದ ಚೇನಂಡ ತಂಡವನ್ನು ಪರಾಭವ ಗೊಳಿಸಿತು. ಚೋಳಂಡ ಪರ ರೋಷನ್(24ನಿ), ಗಣಪತಿ(26ನಿ), ಚೇನಂಡ ಪರ ಅಯ್ಯಪ್ಪ(36ನಿ)ದಲ್ಲಿ ಗೋಲು ದಾಖಲಿಸಿದರು.

ಮೇಕೇರಿರ ತಂಡ 2-0 ಗೋಲುಗಳಿಂದ ನಾಮೇರ ತಂಡವನ್ನು ಮಣಿಸಿತು. ಮೇಕೇರಿರ ಪರ ಅಭಿನವ್ ಗಣಪತಿ (1ನಿ), ನಿತಿನ್ ತಿಮ್ಮಯ್ಯ(17ನಿ)ದಲ್ಲಿ ಗೋಲು ಹೊಡೆದರು. ದಾಸಂಡ ತಂಡ 2-1 ಗೋಲುಗಳಿಂದ ಮಂಡೀರ ತಂಡವನ್ನು ಪರಾಭವ ಗೊಳಿಸಿತು. ದಾಸಂಡ ಪರ ಆಕಾಶ್(30, 40ನಿ), ಮಂಡಿರ ಪರ ಗಣಪತಿ(33ನಿ)ದಲ್ಲಿ ಗೋಲು ಬಾರಿಸಿದರು. ಕುಪ್ಪಂಡ(ಕೈಕೇರಿ) ತಂಡವು 1-0 ಗೋಲಿನಿಂದ ಚೌರೀರ(ಹೊದ್ದೂರು), ತಂಡವನ್ನು ಪರಾಭವ ಗೊಳಿಸಿತು. ಕುಪ್ಪಂಡ ಪರ ಸೋಮಯ್ಯ(38ನಿ)ದಲ್ಲಿ ಹೊಡೆದ ಏಕೈಕ ಗೋಲಿನಿಂದ ಮುಂದಿನ ಸುತ್ತಿನ ಪ್ರವೇಶ ಪಡೆದುಕೊಂಡಿತು. ಐನಂಡ 1-0 ಗೊಲಿನಿಂದ ಕುಮ್ಮಡ ತಂಡವನ್ನು ಮಣಿಸಿತು. ಐನಂಡ ಪರ ಆಕಾಶ್ ಪೂವಣ್ಣ(32ನಿ)ದಲ್ಲಿ ಗೋಲು ಬಾರಿಸಿದರು.

ಚಾಂಪಿಯನ್ಸ್ ಲೀಗ್

ಚಾಂಪಿಯನ್ಸ್ ಲೀಗ್ ಪಂದ್ಯಾಟದಲ್ಲಿ ಪಳಂಗಂಡ ತಂಡ ಕುಲ್ಲೇಟ್ಟಿರ ತಂಡವನ್ನು 1-0 ಗೋಲಿನಿಂದ ಪರಾಭವ ಗೊಳಿಸಿತು. ಪಳಂಗಂಡ ಪರ ಪೊನ್ನಪ್ಪ(6ನಿ)ದಲ್ಲಿ ಗೋಲು ಬಾರಿಸಿದರು. ಪರದಂಡ ತಂಡವು 2-1 ಗೋಲುಗಳಿಂದ ಮಂಡೇಪಂಡ ತಂಡವನ್ನು ಪರಾಭವ ಗೊಳಿಸಿತು. ಪರದಂಡ ಪರ ಕೀರ್ತಿ(6ನಿ), ಪ್ರಜ್ವಲ್(26ನಿ), ಮಂಡೇಪಂಡ ಪರ ಸಜನ್(13ನಿ)ದಲ್ಲಿ ಗೋಲು ಬಾರಿಸಿದರು.