ಕಾಕೋಟುಪರಂಬು (ವೀರಾಜಪೇಟೆ), ಏ. 29: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ನಾಕೌಟ್ ಹಾಕಿ ಪಂದ್ಯಾವಳಿಯಲ್ಲಿ ಕೋದಂಡ, ಕಡೇಮಾಡ, ಪುಚ್ಚಿಮಾಡ, ಕೊಕ್ಕಂಡ ಚಾಂಪಿಯನ್ಸ್ ಲೀಗ್ನಲ್ಲಿ ಚೇಂದಂಡ, ಕೂತಂಡ ತಂಡಗಳು ಮುನ್ನಡೆ ಸಾಧಿಸಿದೆ.
ಲೀಗ್ ಪಂದ್ಯದಲ್ಲಿ ಚಾಂಪಿಯನ್ಸ್ ಚೇಂದಂಡ 2-0 ಗೋಲುಗಳಿಂದ ಮುಕ್ಕಾಟ್ಟಿರ(ಬೋಂದ) ತಂಡವನ್ನು ಪರಾಭವ ಗೊಳಿಸಿದೆ. ಚೇಂದಂಡ ಪರ ಮೋಕ್ಷಿತ್(4,22ನಿ)ದಲ್ಲಿ ಗೋಲು ಬಾರಿಸಿದರು. ಕಲಿಯಂಡ ತಂಡ ಬಾರದ ಕಾರಣ ಆಯೋಜಕರು ಕೂತಂಡ ತಂಡವನ್ನು ವಿಜಯಿ ಎಂದು ಘೋಷಿಸಿದೆ. ನಾಕೌಟ್ ಪಂದ್ಯಾಟದಲ್ಲಿ ಕೋದಂಡ ತಂಡ ಮಾಜಿ ಚಾಂಪಿಯನ್ ನೆಲ್ಲಮಕ್ಕಡ ತಂಡವನ್ನು 1-0 ಗೋಲಿನಿಂದ ಪರಾಭವ ಗೊಳಿಸಿತು.
ಪುಚ್ಚಿಮಾಡ ತಂಡ ಕರ್ತಮಾಡ ತಂಡವನ್ನು 4-3 ಗೋಲುಗಳಿಂದ ಟ್ಯೆಬ್ರೆಕರ್ನಲ್ಲಿ ಮಣಿಸಿದರೆ, ನಿಗದಿತ ಅವದಿಯಲ್ಲಿ 1-1 ಗೋಲುಗಳ ಸಮಬಲ ಸಾಧಿಸಿತು. ಕರ್ತಮಾಡ ಪರ ರೋಷನ್(28ನಿ), ಟ್ಯೆ ಬ್ರೇಕರ್ನಲ್ಲಿ ಕಿರಣ್, ರೋಷನ್, ಪುಚ್ಚಿಮಾಡ ಪರ ಯಶ್ವಿನ್(9ನಿ), ಟ್ಯೆ ಬ್ರೇಕರ್ನಲ್ಲಿ ಅಯ್ಯಪ್ಪ, ವಿರಾಟ್, ಭವನ್ ಗೋಲು ದಾಖಲಿಸಿದರು. ಕೊಕ್ಕಂಡ ತಂಡ ಬಯವಂಡ ತಂಡವನ್ನು 3-1 ಗೊಲುಗಳಿಂದ ಪರಾಭವ ಗೊಳಿಸಿದರೆ; ಕೊಕ್ಕಂಡ ಪರ ಪೊನ್ನಣ್ಣ (20,29ನಿ), ಚಿರಾಗ್ (24ನಿ), ಬಯವಂಡ ದೀಪಕ್ (3ನಿ) ದಲ್ಲಿ ಗೋಲು ಬಾರಿಸಿದರು.