ಮಡಿಕೇರಿ, ಏ. 29: ಮಡಿಕೇರಿ ನಗರ ವರ್ಕ್‍ಶಾಪ್ ಕಾರ್ಮಿಕರ ಸಂಘದ ವಾರ್ಷಿಕ ಮಹಾಸಭೆ ಮತ್ತು ಕಾರ್ಮಿಕರ ದಿನಾಚರಣೆ ಮೇ 1 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಹೊಟೇಲ್ ಸಮುದ್ರ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪಿ.ರಮೇಶ್ ತಿಳಿಸಿದ್ದಾರೆ.

ಕಾರ್ಮಿಕ ದಿನಾಚರಣೆಯ ಹಿನ್ನೆಲೆಯಲ್ಲಿ ನಗರದ ವರ್ಕ್‍ಶಾಪ್‍ಗಳಲ್ಲಿ ಬುಧವಾರ ಸೇವೆಯನ್ನು ಸ್ಥಗಿತಗೊಳಿಸುವದರಿಂದ ಗ್ರಾಹಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.