ಸೋಮವಾರಪೇಟೆ, ಏ. 29: ತಾಲೂಕು ಬಾಲಭವನ ಸೊಸೈಟಿ ಮತ್ತು ಶಿಶು ಅಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಇಲ್ಲಿನ ಸ್ತ್ರೀಶಕ್ತಿ ಭವನದಲ್ಲಿ ಆಯೋಜಿಸಿರುವ ಮಕ್ಕಳ ಬೇಸಿಗೆ ಶಿಬಿರಕ್ಕೆ ತಹಶೀಲ್ದಾರ್ ಗೋವಿಂದರಾಜ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ಶಿಬಿರಗಳು ಅವಶ್ಯಕವಾಗಿವೆ. ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಹೊಂದಿರಬೇಕು. ಗ್ರಾಮೀಣ ಕಲೆಗಳ ಬಗ್ಗೆ ತಿಳಿದಿರಬೇಕು ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಎಂ. ಅಣ್ಣಯ್ಯ, ತರಬೇತುದಾರರಾದ ಶಂಕರಯ್ಯ, ರಮೇಶ್, ಇಲಾಖೆಯ ಅಧಿಕಾರಿಗಳಾದ ವಿಮಲ, ಎಂ. ನಿರ್ಮಲ ಉಪಸ್ಥಿತರಿದ್ದರು.