ಮಡಿಕೇರಿ, ಏ.29: ಜಿಲ್ಲಾಡಳಿತದ ವತಿಯಿಂದ ಸಾರ್ವಜನಿಕರಿಗೆ ತುರ್ತು ಸೇವೆಗಳನ್ನು ಒದಗಿಸಲು, ಬರ ಪರಿಹಾರ ಸಮಸ್ಯೆ ನಿವಾರಣೆ ಹಾಗೂ ಪ್ರಕೃತಿ ವಿಕೋಪದಂತಹ ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೆ ವಾರದ ಎಲ್ಲಾ ದಿನಗಳಲ್ಲಿ ನಿರಂತರವಾಗಿ ಸೇವೆಯನ್ನು ಒದಗಿಸಲು ಹಾಗೂ ದೂರುಗಳನ್ನು ಸ್ವೀಕರಿಸಿ ತುರ್ತು ಸ್ಪಂದನೆ ನೀಡಲು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ನಿಯಂತ್ರಣಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ಈ ಸೇವೆಯನ್ನು ಬಳಸಿಕೊಳ್ಳುವಂತೆ ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲಾ ಕೇಂದ್ರ, ಮಡಿಕೇರಿ 08272-221077 (ಟಾಲ್ ಪ್ರೀ ನಂ.1077), ಉಪ ವಿಭಾಗಾಧಿಕಾರಿ, ಮಡಿಕೇರಿ ಉಪ ವಿಭಾಗ 9739979309, ಮಡಿಕೇರಿ ನಗರ 08272-220111, ಪೌರಾಯುಕ್ತರು, ನಗರಸಭೆ, ಮಡಿಕೇರಿ 9449979262, ತಾಲೂಕು ಕೇಂದ್ರ, ಮಡಿಕೇರಿ 08272-228396, ತಹಶೀಲ್ದಾರ್, ಮಡಿಕೇರಿ ತಾಲೂಕು 8277863434, ತಾಲೂಕು ಕೇಂದ್ರ, ವೀರಾಜಪೇಟೆ 08274-256328, ವೀರಾಜಪೇಟೆ ತಾಲೂಕು ತಹಶೀಲ್ದಾರ್-9845909114, 9591875575, ಸೋಮವಾರಪೇಟೆ ತಾಲೂಕು ಕೇಂದ್ರ 08276-282045, ಸೋಮವಾರಪೇಟೆ ತಾಲೂಕು ತಹಶೀಲ್ದಾರ್ 9845909114 ನ್ನು ಸಂಪರ್ಕಿಸಬಹುದು.