ಸೋಮವಾರಪೇಟೆÉ, ಏ. 25: ತಣ್ಣೀರುಹಳ್ಳ ಗ್ರಾಮದ ಬಸವೇಶ್ವರ ಯುವಕ ಸಂಘದ ಆಶ್ರಯದಲ್ಲಿ ತಾ. 28ರಂದು ರಾಜ್ಯ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಕೆ. ಕಿಶೋರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಬಸವೇಶ್ವರ ಯುವಕ ಸಂಘದ 46ನೇ ವಾರ್ಷಿಕೋತ್ಸವ ಹಾಗೂ ಯುಗಾದಿ ಹಬ್ಬದ ಅಂಗವಾಗಿ, ತಣ್ಣೀರುಹಳ್ಳದ ಶಾಲಾ ಮೈದಾನದಲ್ಲಿ 2ನೇ ವರ್ಷದ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಯಲಿದೆ ಎಂದರು.

ಅಂದು ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಸಂಸದ ಪ್ರತಾಪ್ ಸಿಂಹ, ಹಾಸನದ ಶಾಸಕ ಪ್ರೀತಮ್ ಗೌಡ, ಮಾಜೀ ಸಚಿವ ಬಿ.ಎ. ಜೀವಿಜಯ, ಜಿ.ಪಂ. ಮಾಜೀ ಅಧ್ಯಕ್ಷ ವಿ.ಎಂ. ವಿಜಯ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಬಡ್ಡಿ ಪಂದ್ಯಾಟದಲ್ಲಿ ಜಯಗಳಿಸುವ ತಂಡಗಳಿಗೆ ಪ್ರಥಮ ಬಹುಮಾನವಾಗಿ ರೂ. 30 ಸಾವಿರ, ಎರಡನೇ ಬಹುಮಾನ 20 ಸಾವಿರ, ಮೂರನೇ ಬಹುಮಾನ 10 ಸಾವಿರ, ನಾಲ್ಕನೇ ಬಹುಮಾನ 5 ಸಾವಿರ ಮತ್ತು ಆಕರ್ಷಕ ಟ್ರೋಫಿಗಳನ್ನು ನೀಡಲಾಗು ವದು. ಪ್ರೋ ಕಬಡ್ಡಿಯ ನಿಯಮಗಳನ್ನು ಅಳವಡಿಸಲಾಗಿದ್ದು, ಆಟಗಾರರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ತಾ. 28ರ ಸಂಜೆ 4 ಗಂಟೆಯೊಳಗೆ ತಂಡಗಳು ಹೆಸರು ನೋಂದಾಯಿಸಿ ಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ 9449828219, 9483262987ನ್ನು ಸಂಪರ್ಕಿಸಬಹುದು ಎಂದರು.

ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಟಿ.ಆರ್. ಪ್ರವೀಣ್, ಖಜಾಂಚಿ ಟಿ.ಕೆ. ಗಗನ್, ಸದಸ್ಯರಾದ ಬಿ.ಜಿ.ರವಿ, ಎಂ.ಕೆ. ಸದಾನಂದ ಉಪಸ್ಥಿತರಿದ್ದರು.