ಗೋಣಿಕೊಪ್ಪ ವರದಿ, ಎ. 25 : ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರ ಆರೋಗ್ಯ ಸೇವೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ 24 ಸಿಬ್ಬಂದಿಗಳಿಗೆ ಸನ್ಮಾನ ಮಾಡುವ ಮೂಲಕ ಪ್ರೋತ್ಸಾಹಿಸಲಾಯಿತು.
11 ದಾದಿಯರು ಹಾಗೂ 13 ಡಿ. ಗ್ರೂಪ್ ನೌಕರರನ್ನು ಸನ್ಮಾನಿಸಿ, ಸನ್ಮಾನ ಪತ್ರ ನೀಡಿ ಪ್ರೋತ್ಸಾಯಿಸಲಾಯಿತು.
ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು ಮಾತನಾಡಿ, ಜೆಸಿಐ ವತಿಯಿಂದ ಎಪ್ರಿಲ್ ತಿಂಗಳನ್ನು ಆರೋಗ್ಯ ಮಾಸ ವಾಗಿ ಆಚರಣೆ ಮಾಡಲಾಗುತ್ತದೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ವೈದ್ಯರೊಂದಿಗೆ ಜನರ ಆರೋಗ್ಯ ಕಾಪಾಡುವಲ್ಲಿ ತೊಡಗಿಕೊಂಡಿರುವ ದಾದಿ ಹಾಗೂ ಡಿ. ಗ್ರೂಪ್ ನೌಕರರನ್ನು ಕೂಡ ಸನ್ಮಾನಿಸಲಾಗುತ್ತಿದೆ ಎಂದರು. ಸ್ವಚ್ಛತೆಗೆ ಹೆಚ್ಚು ಒತ್ತು ಕೊಡುವ ಡಿ. ಗ್ರೂಪ್ ನೌಕರರಿಂದಲೇ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಣೆಯಾಗುತ್ತಿದೆ ಎಂದರು.
ಈ ಸಂದರ್ಭ ವೈದ್ಯರುಗಳಾದÀ ಡಾ. ಗ್ರೀಷ್ಮಾ, ಡಾ. ಸುರೇಶ್, ಜೆಸಿಐ ಗೋಲ್ಡನ್ ಕಾರ್ಯದರ್ಶಿ ಕೊಟ್ಟಂಗಡ ನಾಣಯ್ಯ, ಜೂನಿಯರ್ ಜೆಸಿ ಅಧ್ಯಕ್ಷ ಧ್ಯಾನ್ ಪೆಮ್ಮಯ್ಯ, ಸದಸ್ಯರುಗಳಾದ ಲೇಕಾ, ಪುನಿತ್, ರಾಬಿನ್ ಸುಬ್ಬಯ್ಯ ಹಾಗೂ ಪುಳ್ಳಂಗಡ ನಟೇಶ್ ಉಪಸ್ಥಿತರಿದ್ದರು.