ಕೂಡಿಗೆ, ಏ. 25: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೊಠಡಿಗಳ ಹಿಂಬದಿಯ ಗಾಜಿನ ಕಿಟಕಿಗಳಿಗೆ ಕಿಡಿಗೇಡಿಗಳು ಕಲ್ಲು ಹೊಡೆದು ಪುಡಿ ಪುಡಿ ಮಾಡಿರುವ ಘಟನೆ ನಡೆದಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ತಡೆಗೋಡೆಯ ಎರಡನೇ ಅಂತಸ್ತಿನ ತರಗತಿ ಕೋಣೆಯ ಕಿಟಕಿಗಳು, ಗಣಕಯಂತ್ರದ ಕೊಠಡಿಯ ಕಿಟಕಿಗಳು, ಪಕ್ಕದ ವಸತಿ ನಿಲಯದ ಕಿಟಕಿಗಳು ಸೇರಿದಂತೆ ಒಟ್ಟು 11 ಕಿಟಕಿಗಳ ಗಾಜುಗಳಿಗೆ ಕಿಡಿಗೇಡಿಗಳು ಕಲ್ಲು ಹೊಡೆದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಪ್ರಾಂಶುಪಾಲರು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.