ಭಾಗಮಂಡಲ, ಏ. 25: ಚೆಟ್ಟಿಮಾನಿಯಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕೆದಂಬಾಡಿ ಕಪ್ ಕ್ರಿಕೆಟ್ನಲ್ಲಿ ಪಡ್ಪು ಹಾಗೂ ಅಯ್ಯಂಡ್ರ ತಂಡ ಮುಂದಿನ ಹಂತ ಪ್ರವೇಶಿಸಿದೆ.
ಕೋಳಿಮಾಡು ತಂಡ 48ರನ್ ಗಳಿಸಿತು. ಎದುರಾಳಿ ಅಯ್ಯಂಡ್ರ 1 ವಿಕೆಟ್ಗೆ 53 ರನ್ ಗಳಿಸಿ ಜಯಗಳಿಸಿತು. ನಿಡ್ಯಮಲೆ 81 ರನ್ ಗಳಿಸಿದರೆ ಕುಂಬಳಚೇರಿ 4 ವಿಕೆಟ್ಗೆ 83ರನ್ ಬಾರಿಸಿ ಜಯಸಾಧಿಸಿತು. ಕಟ್ಟೆಕೋಡಿ 47 ರನ್ ಗಳಿಸಿದರೆ, ಕುದುಪಜೆ 4 ವಿಕೆಟ್ಗೆ 49 ರನ್ ಬಾರಿಸಿ ಜಯಗಳಿಸಿತು.
ಅಯ್ಯಂಡ್ರ 95 ರನ್ ಗಳಿಸಿದರೆ, ಕುದುಪಜೆ 93 ರನ್ ಗಳಿಸಿ ಸೋಲನುಭವಿಸಿತು. ಕುಂಬಳಚೇರಿ 97 ರನ್ ಗಳಿಸಿದರೆ ಕೆದಂಬಾಡಿ (ಸಿ) 47 ರನ್ ಗಳಿಸಿ ಸೋಲು ಕಂಡಿತು. ಚೆರಿಯಮನೆ 67 ರನ್ ಗಳಿಸಿದರೆ ಪಡ್ಪುಮನೆ 68 ರನ್ ಬಾರಿಸಿ ಗೆಲವು ಸಾಧಿಸಿತು. ಅಯ್ಯಂಡ್ರ 74 ರನ್ ಗಳಿಸಿದರೆ ಕುಂಬಳಚೇರಿ 68 ರನ್ ಗಳಿಸಿ ಸೋಲನುಭವಿಸಿತು.