ಮಡಿಕೇರಿ, ಏ. 24: ವೀರಾಜಪೇಟೆ ಸಮೀಪದ ಪೆರುಂಬಾಡಿಯಲ್ಲಿರುವ ಸಂಶುಲ್ ಉಲಮಾ ಬಾಲಕಿಯರ ಅನಾಥಾಲಯ ಸಂಸ್ಥೆಯ ಆಶ್ರಯದಲ್ಲಿ ತಾ. 25 ರಂದು (ಇಂದು) ಇಬ್ಬರು ಅನಾಥ ಯುವತಿಯರ ಸಾಮೂಹಿಕ ವಿವಾಹ ಸಂಜೆ 4.30 ಗಂಟೆಗೆ ನಡೆಯಲಿದೆ.
ಪೆರುಂಬಾಡಿ ಅನಾಥಾಲಯದ ಆವರಣದಲ್ಲಿ ನಡೆಯಲಿರುವ ಈ ವಿವಾಹ ಸಮಾರಂಭದಲ್ಲಿ ಧರ್ಮಗುರುಗಳು, ಸಮಾಜದ ಹಾಗೂ ಅಮಾಅತ್ಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಸಂಶುಲ್ ಉಲಮಾ ಬಾಲಕಿಯರ ಅನಾಥಾಲಯ ಸಂಸ್ಥೆಯು ಕಳೆದ 15 ವರ್ಷಗಳಿಂದ ಮುಸ್ಲಿಂ ಸಮಾಜದ ಅನಾಥ ಹಾಗೂ ಬಡ ಬಾಲಕಿಯರಿಗೆ ಆಶ್ರಯ ನೀಡುವ ಮೂಲಕ ಧಾರ್ಮಿಕ ಹಾಗೂ ಲೌಕಿಕ ವಿದ್ಯಾಭ್ಯಾಸವನ್ನು ನೀಡುತ್ತಾ ಬರುತ್ತಿದೆ.